Site icon Suddi Belthangady

ತೆಲಂಗಾಣ ಚುನಾವಣಾ ಕಾಂಗ್ರೆಸ್ ವಾರ್‌ರೂಂ ಸಂಯೋಜಕರಾಗಿ ರಕ್ಷಿತ್ ಶಿವರಾಂ ನೇಮಕ

ಬೆಳ್ತಂಗಡಿ: ತೆಲಂಗಾಣ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಚುನಾವಣಾ ವಾರ್‌ರೂಂ ಸಂಯೋಜಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇಮಕಗೊಂಡಿದ್ದಾರೆ. ವಿವಿಧ ರಾಜ್ಯಗಳಿಂದ ಪಕ್ಷದ ೧೮ ಪ್ರಮುಖರನ್ನು ಎಐಸಿಸಿಯಿಂದ ಸಂಯೋಜಕರಾಗಿ ನೇಮಿಸಲಾಗಿದ್ದು ಇದರಲ್ಲಿ ಬೆಸ್ಟ್ ಫೌಂಡೇಶನ್ ಮುಖ್ಯಸ್ಥರೂ ಆಗಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಂ ಒಳಗೊಂಡಿದ್ದಾರೆ. ಚುನಾವಣಾ ಕಾರ್ಯತಂತ್ರ, ಪ್ರಚಾರ, ಸಭೆ ಮತ್ತಿತರ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು, ಪಕ್ಷದ ಗೆಲುವಿಗೆ ಪೂರಕವಾಗಿ ಕ್ಷೇತ್ರವಾರು ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ವರದಿ ಸಂಗ್ರಹಿಸಿ ಎಐಸಿಸಿಗೆ ಮಾಹಿತಿ ಒಪ್ಪಿಸುವುದು ವಾರ್‌ರೂಮ್ ಸಂಯೋಜಕರ ಜವಾಬ್ದಾರಿಯಾಗಿದೆ.

Exit mobile version