Site icon Suddi Belthangady

ಉದ್ಯಮಿ ಶಶಿಧರ್ ಶೆಟ್ಟಿಯವರಿಂದ ವಿವಿಧ ದೇವಸ್ಥಾನಗಳಿಗೆ ದೇಣಿಗೆ

ಬೆಳ್ತಂಗಡಿ: ಗುಜರಾತ್‌ನ ಉದ್ಯಮಿಯಾಗಿರುವ ಬರೋಡಾದ ಶಶಿ ಕ್ಯಾಟರಿಂಗ್ ಸರ್ವಿಸಸ್‌ನ ಮಾಲಕ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರು ವಿವಿಧ ದೇವಸ್ಥಾನಗಳಿಗೆ ರೂ. 30 ಲಕ್ಷ ದೇಣಿಗೆ ನೀಡಿದ್ದಾರೆ. ಶ್ರೀ ವೀರಾಂಜನೆಯ ಸ್ವಾಮಿ ದೇವಸ್ಥಾನ ಅಡ್ಯಾರು ಮಂಗಳೂರು ಕ್ಷೇತ್ರಕ್ಕೆ ರೂ. 20 ಲಕ್ಷ, ಮುಂಡೆತ್ತಾಯ ದೇವಸ್ಥಾನ ಕೊಡೆಕ್ಕಲ್ ಅಳಪೆ ಕಣ್ಣೂರುಗೆ ರೂ.5 ಲಕ್ಷ ಮತ್ತು ಕೃಷ್ಣಗೋಕುಲ ಗೋಪಾಲಕೃಷ್ಣ ಟ್ರಸ್ಟ್ ಮುಂಬಯಿಗೆ ರೂ. 5 ಲಕ್ಷ ದೇಣಿಗೆ ನೀಡಿ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಶಶಿಧರ ಶೆಟ್ಟಿ ಸಹಕರಿಸಿದ್ದಾರೆ. ಶಶಿಧರ ಶೆಟ್ಟಿಯವರು ಉದ್ಯಮದೊಂದಿಗೆ ಸಮಾಜಮುಖಿ ಚಿಂತನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಹಲವಾರು ದೈವಸ್ಥಾನ, ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ದೇಣಿಗೆ ನೀಡಿದ್ದಾರೆ.

Exit mobile version