Site icon Suddi Belthangady

ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ-ಡಿ.3: ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ-ವಿದ್ಯಾಮಾತಾ ಆಯೋಜನೆ

ಪುತ್ತೂರು: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ಸಂಯೋಜನೆಯಲ್ಲಿ, ಪುತ್ತೂರು ನಗರ ಠಾಣಾ ಆರಕ್ಷಕ ಉಪನಿರೀಕ್ಷಕರಾಗಿರುವ ಆಂಜನೇಯ ರೆಡ್ಡಿಯವರ ಮಾರ್ಗದರ್ಶನದಲ್ಲಿ ಡಿ.3 ರಂದು ಪುತ್ತೂರು ವಿವೇಕಾನಂದ ಪದವಿ ಕಾಲೇಜು(ಸ್ವಾಯತ್ತ)ಇಲ್ಲಿ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನೂ ಉತ್ತೇಜಿಸುವ ಉದ್ದೇಶದಿಂದ ಮಾದರಿ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆಯು ನಡೆಯಲಿದೆ.

ಕೆ.ಎ.ಎಸ್, ಎ.ಡಿ.ಎ, ಎಸ್.ಡಿ.ಎ, ಪಿ.ಎಸ್.ಐ, ಪಿ.ಸಿ, ಪಿ.ಡಿ.ಒ ಬ್ಯಾಂಕಿಂಗ್‌ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯಲ್ಲಿರುವವರಿಗೆ ಪ್ರೇರಣೆ ನೀಡುವ ಸಲುವಾಗಿ ಈ ಪರೀಕ್ಷಾ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.ರಾಜ್ಯದಲ್ಲೇ ಇದೇ ಪ್ರಪ್ರಥಮ ಬಾರಿಗೆ ನಗದು ಬಹುಮಾನ ನೀಡುವ ಮೂಲಕ ಸ್ಪರ್ಧೆ ಏರ್ಪಡಿಸಲಾಗಿದ್ದು, ಪಿಯುಸಿ, ಪದವಿ ಓದುತ್ತಿರುವ ಅಥವಾ ಓದು ಮುಗಿಸಿರುವ 40 ರ ಒಳಗಿನ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.ಮೊದಲು ನೋಂದಾವಣೆ ಮಾಡುವ 1000 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.100 ಅಂಕಗಳ ಪ್ರಶ್ನೆ ಪತ್ರಿಕೆ ಇರಲಿದ್ದು, ಬಹು ಆಯ್ಕೆಯ ಪ್ರಶ್ನೆಗಳು ಕೂಡಾ ಇರುತ್ತದೆ.

ಕಾಲಾವಕಾಶ 90 ನಿಮಿಷಗಳು.(ಬೆಳಿಗ್ಗೆ 11ರಿಂದ 12:30).ಭಾಗವಹಿಸುವ ಅಭ್ಯರ್ಥಿಗಳು ಬೆಳಿಗ್ಗೆ 10ರ ಒಳಗಾಗಿ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಿರತಕ್ಕದ್ದು.ಬಳಿಕ ಬಂದವರಿಗೆ ಅವಕಾಶವಿಲ್ಲ.ಪ್ರಶ್ನಾಪತ್ರಿಕೆ ಕನ್ನಡ ಮಾಧ್ಯಮದಲ್ಲಿ ಇರುತ್ತದೆ.ನೋಂದಣಿಗಾಗಿ ವಿದ್ಯಾಮಾತಾದ ಪುತ್ತೂರು ಅಥವಾ ಸುಳ್ಯ ಕಛೇರಿಯನ್ನು ನ.26ರ ಒಳಗಾಗಿ ಸಂಪರ್ಕಿಸಬಹುದು.ಇಲ್ಲವೇ ಕ್ಕಿ ಕೋಡ್ ಬಳಸಿ ನೋಂದಾಯಿಸಿಕೊಳ್ಳಬಹುದು.

ಮಾಹಿತಿಗಾಗಿ ವಿದ್ಯಾಮಾತಾ ಪುತ್ತೂರು ಕಛೇರಿ ಮೊಬೈಲ್ ಸಂಖ್ಯೆ 9148935808, 9620468869 ಹಾಗೂ ಸುಳ್ಯ ಕಛೇರಿ, ಮೊಬೈಲ್ ಸಂಖ್ಯೆ 9448527606ಯನ್ನು ಸಂಪರ್ಕಿಸಬಹುದು.

ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಂಕ ಪಡೆಯೋ ವಿದ್ಯಾರ್ಥಿಗಳಿಗೆ ಪ್ರಥಮ 50 ಸಾವಿರ ದ್ವಿತೀಯ 25 ಸಾವಿರ ಹಾಗೂ ತೃತೀಯ 12.500 ಸಾವಿರ ರೂಪಾಯಿ ಬಹುಮಾನ ಸಿಗಲಿದ್ದು, ಉತ್ತಮವಾಗಿ ಸಾಧನೆ ಮಾಡಿದ 10 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂಪಾಯಿ ಸಿಗಲಿದೆ.

ಮೊದಲು ಹೆಸರು ನೋಂದಾಯಿಸಿದ ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಕೊನೆಯ ದಿನಾಂಕ ನ.26 ಆಗಿದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.

Exit mobile version