ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿ ವೇತನ ಹೆಚ್ಚಿಸಲು ತಾಲೂಕಿನ ಹೆಚ್ಚಿನ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡುವ ಮೂಲಕ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸರಕಾರದ ಆರನೇ ಗ್ಯಾರಂಟಿ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯವರಿಗೆ 10 ಸಾವಿರ ವೇತನದ ಭರವಸೆ ನೀಡಿದ್ದರು ಮತ್ತು ವಿವಿಧ ಬೇಡಿಕೆ ಈಡೇರಿಸಲು ಅನಿರ್ದಿಷ್ಟ ಮುಷ್ಕರ ಬೆಂಗಳೂರು ಕ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸ್ವತಂತ್ರ ಸಂಘದ ಅಧ್ಯಕ್ಷೆ ರಾಜೀವಿ ಕೆ.ಕಡವಿನ ಬಾಗಿಲು ಇಳಂತಿಲ, ಪ್ರಧಾನ ಕಾರ್ಯದರ್ಶಿ ಶಶಿಕಲಾ ಕೆ.ಕೋಯನಗರ ಇಂದಬೆಟ್ಟು, ಜಿಲ್ಲಾ ಪ್ರತಿನಿಧಿ ಭಾರತಿ ಹೊಸ್ತೋಟ ಹಾಗೂ ತಾಲೂಕಿನ ಸ್ವತಂತ್ರ ಸಂಘಟನೆಯ ಪದಾಧಿಕಾರಿಗಳು,ತಾಲೂಕಿನಿಂದ ನೂರಾರು ಮತ್ತು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತೆ ಹಾಗೂ ಸಹಾಯಕಿಯರು ಭಾಗವಹಿಸಿದ್ದರು.