Site icon Suddi Belthangady

ಉಜಿರೆ: ಅನುಗ್ರಹದಲ್ಲಿ ಶಿಕ್ಷಕ ರಕ್ಷಕರ ಕ್ರೀಡಾಕೂಟ

ಉಜಿರೆ: “ಶಿಕ್ಷಣ ಸಂಸ್ಥೆಯೊಂದಿಗೆ ಪಾಲಕ ಪೋಷಕರ ಬಾಂದವ್ಯ ಉತ್ತಮವಾಗಿದ್ದಾಗ ಹಾಗೂ ಶಿಕ್ಷಕ ರಕ್ಷಕರೊಳಗಿನ ಸಂಬAಧ ಚೆನ್ನಾಗಿದ್ದಾಗ ಶಿಕ್ಷಣ ಸಂಸ್ಥೆಯು ಉತ್ತಮ ರೀತಿಯಲ್ಲಿ ಮುಂದುವರಿಯಲು ಸಾದ್ಯ” ಎಂದು ಶಾಲಾ ಸಂಚಾಲಕರಾದ ವಂ! ಫಾ! ಜೇಮ್ಸ್ ಡಿಸೋಜ ರವರು ಹೇಳಿದರು.

ಅನುಗ್ರಹ ಶಿಕ್ಷಣ ಸಂಸ್ಥೆಯ 2023-24ನೇ ಸಾಲಿನ ಶಿಕ್ಷಕ ರಕ್ಷಕರ ಕ್ರೀಡಾಕೂಟವನ್ನು ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೊ ರವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು.

ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಡಾ.ಪ್ರಶಾಂತ್ ರವರು ಉಪಸ್ಥಿತರಿದ್ದರು.ಶಿಕ್ಷಕ ರಕ್ಷಕರಿಗೆ 40ರ ಮೇಲಿನ ಹಾಗೂ ೪೦ರ ಕೆಳಗಿನ ವಯೋಮಾನದ ಪ್ರಕಾರ ಗುಂಡೆಸೆತ, ಓಟ, ಹಗ್ಗಜಗ್ಗಾಟ ಹಾಗೂ ಅದೃಷ್ಟದಾಟಗಳನ್ನು ನಡೆಸಲಾಯಿತು.ಆಗಮಿಸಿರುವ ಎಲ್ಲಾ ಪಾಲಕರು, ಶಿಕ್ಷಕರು ಹೆಚ್ಚಿನ ಆಸಕ್ತಿಯಿಂದ ಆಟೋಟಗಳಲ್ಲಿ ಪಾಲ್ಗೊಂಡರು. ಶ್ರೀ ಪ್ರಭಾಕರ ಶೆಟ್ಟಿಯವರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Exit mobile version