ಮರೋಡಿ: ಪೆಜತ್ತಾಕಟ್ಟೆ ಮನೆಯ ದಿ.ಬೋಜ ಪೂಜಾರಿ ಯವರ ಪುತ್ರ ಸತೀಶ್ (44ವರ್ಷ) ಅಲ್ಪ ಕಾಲದ ಅಸೌಖ್ಯ ದಿಂದ ನ.20ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಮಂಗಳೂರು ಹೋಟೆಲ್ ಒಂದರಲ್ಲಿ ಸುಮಾರು 18ವರ್ಷ ಉದ್ಯೋಗದಲ್ಲಿದ್ದರು.
ಮೃತರು ರತ್ನ, ಸಹೋದರ ರಾಜೇಶ್, ಸಹೋದರಿ ಮಮತಾ, ಪತ್ನಿ ಪ್ರಮೀಳಾ, ಮಕ್ಕಳಾದ ಸಮೀಕ್ಷಾ, ಸಾನ್ವಿ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.