Site icon Suddi Belthangady

ಮದ್ದಡ್ಕ ನೂರಲ್ ಹುದಾ‌ ಜುಮಾ ಮಸೀದಿ ವತಿಯಿಂದ ಮಾದಕ ದ್ರವ್ಯ‌ ಮುಕ್ತ‌ ಮದ್ದಡ್ಕ‌ ಜನಜಾಗೃತಿ ಜಾಥಾ

ಕುವೆಟ್ಟು: ನೂರಲ್ ಹುದಾ‌ ಜುಮಾ ಮಸೀದಿ ಮದ್ದಡ್ಕ ಇದರ ವತಿಯಿಂದ ಮಾದಕ ದ್ರವ್ಯ‌ ಮುಕ್ತ‌ ಮದ್ದಡ್ಕ‌ ಜನಜಾಗ್ರತಿ ಜಾಥಾ ನ.19‌ರಂದು‌ ಮದ್ದಡ್ಕದಲ್ಲಿ ಜರಗಿತು ಜಾಥವನ್ನು ಹಸನ್ ಮುಬಾರಕ್ ಸಖಾಫಿ ಖತೀಬರು ನೂರಲ್ ಹುದಾ ಜಮಾ ಮಸೀದಿ ಮದ್ದಡ್ಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ದಡ್ಕ ಮಸೀದಿಯ ಆಧ್ಯಕ್ಷ ಅಶ್ರಫ್ ಚಿಲಿಂಬಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್.ಎ.ಯಂ ತಮ್ಮ ಇಲಾಖೆಯು ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪ್ರೇರಣಾ ಬಾಷಣಗಾರರು ರಫೀಕ್ ಮಾಸ್ಟರ್ ಮಂಗಳೂರು ಅಗಮಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ಬಹಳಷ್ಟು ಸಣ್ಣ ಪ್ರಾಯದ ಯುವಕರು ಇಂತಹ ಮಾದಕ ದ್ರವ್ಯ ದುಷ್ಚಟಗಳಿಗೆ ಬಲಿಯಾಗುತ್ತಿದ್ದು ನಾವೆಲ್ಲರೂ ಇದಕ್ಕೆ ಕಡಿವಾಣ ಹಾಕಬೇಕಿದೆ.ಎಲ್ಲರ ಸಹಕಾರ ಇರಲಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಮದ್ದಡ್ಕ ಮಸೀದಿಯ ಗೌರವಾಧ್ಯಕ್ಷ ಎಸ್.ಎ.ರಾಝೀಯುದ್ದೀನ್ ಸಬರಬೈಲು, ಪ್ರಧಾನ ಕಾರ್ಯದರ್ಶಿ ಎಮ್ ಸಿರಾಜ್ ಚಿಲಿಂಬಿ, ಕೋಶಾದಿಕಾರಿ ರಿಯಾಝ್ ಸಬರಬೈಲು, ಉಪಾಧ್ಯಕ್ಷ ಸ್ವಾಲಿಹ್ ಮದ್ದಡ್ಕ, ಆರೀಸ್ ಶಾಪಿ ಅಧ್ಯಕ್ಷರು ಅನ್ವರುಲ್ ಹಿದಾಯ ಮದರಸ ಪಾದೆ, ಅಬುಸಾಲಿಹ್ ಅಧ್ಯಕ್ಷರು ಎಸ್ ವೈ ಎಸ್ ಆಲಂದಿಲ ಘಟಕ, ರಮ್ಲ ಕೆಲ್ಲಾರ್ ಅಧ್ಯಕ್ಷರು ಮುರ್ಶಿದುಲ್ ಅನಾಂ ಅರಬಿಕ್ ಸ್ಕೂಲ್ ಆಲಂದಿಲ, ಮುಸ್ತಾಫ ಜಿಕೆ ಸದಸ್ಯರು ಗ್ರಾ ಪಂ ಕುವೆಟ್ಟು, ರಿಯಾಝ್ ಮದ್ದಡ್ಕ ಸದಸ್ಯರು ಗ್ರಾ ಪಂ ಕುವೆಟ್ಟು, ಹೈದರ್ ಎಚ್ ಎಸ್ ಅಧ್ಯಕ್ಷರು ಟಿ ಆರ್ ಯಂ (ರಿ) ಮದ್ದಡ್ಕ, ಶಾಕೀರ್ ಚಿಲಿಂಬಿ ಅಧ್ಯಕ್ಷರು ಹೆಲ್ಪ್ ಲೈನ್ ಮದ್ದಡ್ಕ, ಹಾಜಿ ಉಸ್ಮಾನ್ ಆಲಂದಿಲ ಬ್ಲಾಕ್ ಅಧ್ಯಕ್ಷರು ಕೆ ಯಂ ಜೆ, ಇಲ್ಯಾಸ್ ಚಿಲಿಂಬಿ ಅಧ್ಯಕ್ಣರು ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಘಟಕ, ಅಶ್ರಫ್ ಅಧ್ಯಕ್ಷರು ಎಸ್ ಎಸ್ ಎಫ್ ಮದ್ದಡ್ಕ ಘಟಕ, ಯಂ ಎಚ್ ಅಬೂಬಕ್ಕರ್ ಅಧ್ಯಕ್ಷರು ಎಸ್ ವೈ ಎಸ್ ಮದ್ದಡ್ಕ ಮತ್ತಿತರರು ಉಪಸ್ಥಿತರಿದ್ದರು.

ಸಿರಾಜ್ ಚಿಲಿಂಬಿ ಸ್ವಾಗತಿಸಿ, ಸ್ವಾಲಿಹ್ ವಂದಿಸಿದರು.

Exit mobile version