Site icon Suddi Belthangady

ಶಿರ್ಲಾಲು: 10 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟನೆ

ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು ಕರಂಬಾರು ಯುವ ಬಿಲ್ಲವ ವೇದಿಕೆ ಮಹಿಳಾ ಬಿಲ್ಲವ ವೇದಿಕೆ ಯುವವಾಹಿನಿ ಸಂಚಲನ ಸಮಿತಿ ಇದರ ಆಶ್ರಯದಲ್ಲಿ 10 ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ಆನಂದ ಪೂಜಾರಿ ಕಟ್ರಬೈಲ್ ಇವರ ಗದ್ದೆಯಲ್ಲಿ ನಡೆಯಿತು.

ಖ್ಯಾತ ಉದ್ಯಮಿ ಕೇಶವ ಪೂಜಾರಿ ಬರಮೇಲು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರl ಪ್ರವೀಣ್ ಕೋಟ್ಯಾನ್ ಪಾಲನೆ ವಹಿಸಿದ್ದರು.

ವೇದಿಕೆಯಲ್ಲಿ ತಾಲೂಕು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷಚಿದಾನಂದ ಪೂಜಾರಿ ಎಲ್ದಕ್ಕ ವಿಶ್ವನಾಥ ಸಾಲ್ಯಾನ್ ಜಯ ಕುಮಾರ್ ಕುಶಾಲಾ ರಮೇಶ್ ಸ್ವರಾಜ್ ಎಸ್ ಬಂಗೇರ ದಿಸಾಂತ್ ಮಿತ್ತಮರ್ ಉಪಸ್ಥಿತರಿದ್ದರು.

ಪ್ರತಿಕ್ಷಾ ಮತ್ತು ಶ್ರೇಯಾ ಭಕ್ತಿಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ರಂಜಿತ್ ಅಜೀರೋಲಿ ಸ್ವಾಗತಿಸಿದರು.ಜ್ಞಾನೇಶ್ ಕುಮಾರ್ ಕಟ್ಟ ವಂದಿಸಿದರು.ಹರೀಶ್ ಕಲ್ಲಾಜೆ ನಿರೂಪಿಸಿದರು.ಶಶಿಕಾಂತ ವಿಜಯ್ ಕುಮಾರ್, ಸನತ್ ಕುಮಾರ್, ಯತೀಶ್ ಕುಮಾರ್ ಸಹಕರಿಸಿದರು.

Exit mobile version