Site icon Suddi Belthangady

ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಜ್ಞಾನದ ಜೊತೆಗೆ ಕೈಗಾರಿಕಾ ಕಾರ್ಯಗಳ ಅರಿವು ಕಾರ್ಯಕ್ರಮ

ಕಕ್ಕೆಪದವು: ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಜ್ಞಾನದ ಜೊತೆಗೆ ಕೈಗಾರಿಕಾ ಕಾರ್ಯಗಳ ಅರಿವು ಮತ್ತು ಆಂತರಿಕ ಕೆಲಸದ ವಾತಾವರಣ ಪರಿಚಯಿಸುವ ನಿಟ್ಟಿನಲ್ಲಿ ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು ಇಲ್ಲಿನ ವಾಣಿಜ್ಯಶಾಸ್ತ್ರ ವಿಭಾಗದ ಬಿ.ಕಾಂ.ಪದವಿ ವಿದ್ಯಾರ್ಥಿಗಳು ಕೆ.ಐ.ಒ.ಸಿ‌.ಎಲ್ ಪಣಂಬೂರು ಮಂಗಳೂರು ಇಲ್ಲಿನ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ನ.17ರಂದು ಭೇಟಿ ನೀಡಲಾಯಿತು.

ಸಂಸ್ಥೆಯ ವಿವಿಧ ಭಾಗಗಳನ್ನು ಸಂದರ್ಶಿಸಿ ಕೆಲಸದ ಬಗ್ಗೆ ನೈಜ ಚಿತ್ರಣ ಪಡೆದು ಭದ್ರತಾ ಮತ್ತು ಸುರಕ್ಷತಾ ವಿಭಾಗದ ಮುಖ್ಯಸ್ಥರಾದ ರಘುನಂದನ್ ಅವರಿಂದ ಸಂಪೂರ್ಣ ಉಪಯುಕ್ತ ಮಾಹಿತಿಯನ್ನು ಪಡೆಯಲಾಯಿತು.ಅದಿರುಗಳ ಉತ್ಪಾದನಾ ಪ್ರಕ್ರಿಯೆ, ವೆಚ್ಚ, ಆದಾಯ ಹಾಗೂ ವಿವಿಧ ಯಂತ್ರೋಪಕರಣಗಳು, ಉತ್ಪಾದನೆಯನ್ನು ಮಾಡುವ ವಿಧಾನ ಮೊದಲಾದವುಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಲಾಯಿತು.

ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಅವರು ಕೈಗಾರಿಕಾ ಭೇಟಿಯೊಂದಿಗೆ ಜೊತೆಗಿದ್ದು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ವಿದ್ಯಾಸಂಸ್ಥೆಯ ಸಂಯೋಜಕರಾದ ಯಶವಂತ್.ಜಿ.ನಾಯಕ್ ಕೈಗಾರಿಕಾ ಭೇಟಿಯನ್ನು ಆಯೋಜಿಸಿ ಸಂಪೂರ್ಣ ಮೇಲುಸ್ತುವಾರಿಯನ್ನು ವಹಿಸಿ ಯಶಸ್ವಿಗೊಳಿಸಿದರು.ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಹಾಗೂ ವಿಭಾಗದ ಉಪನ್ಯಾಸಕರು ಜೊತೆಗಿದ್ದು ಸಹಕರಿಸಿದರು.

Exit mobile version