ವೇಣೂರು: ಮಂದಿರ, ದೇವಸ್ಥಾನಗಳು ಹಿಂದೂ ಸಮಾಜದ ಶಕ್ತಿ.ಹಿಂದೂ ಸಮಾಜದ ಆರಾಧನ ಕೇಂದ್ರಗಳು ಉಳಿದರೆ ಮಾತ್ರ ಹಿಂದೂ ಸಮಾಜ ಉಳಿಯಲು ಸಾಧ್ಯ.ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯದಲ್ಲೇ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಅತೀಹೆಚ್ಚು ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ಗುಂಡೂರಿ ಭಜನ ಮಂದಿರದ ನಿರ್ಮಾಣಕ್ಕೂ ನಿಯಮಾನುಸಾರ ಶಾಸಕರ ನಿಧಿಯಿಂದ ರೂ.5 ಲಕ್ಷ ಅನುದಾನ ಒದಗಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಗುಂಡೂರಿ ಗ್ರಾಮದ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ನ.19 ರಂದು ಜರಗಿದ ಶ್ರೀ ದೇವರ ಶಿಲಾಮಯ ಗುಡಿಯ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ದೈವ, ದೇವರ ಆರಾಧನೆಯಲ್ಲಿ ವಿಜ್ಞಾನ ಅಡಗಿದೆ ಜಿ.ಪಂ.ಮಾಜಿ ಉಪಾಧ್ಯಕ್ಷ ಪಿ.ಧರಣೇಂದ್ರ ಕುಮಾರ್ ಅವರು ಮಾತನಾಡಿ, ದೈವ, ದೇವರ ಆರಾಧನೆಯಲ್ಲಿ ವಿಜ್ಞಾನ ಅಡಗಿದೆ. ದೇವರ ಮೇಲಿನ ಭಯ-ಭಕ್ತಿ ನಮ್ಮನ್ನು ಉತ್ತುಂಗಕ್ಕೆ ಏರಿಸುತ್ತದೆ.ಭೂಸುಧಾರಣೆ ಕಾನೂನಿನಿಂದು ಇಂದು ರೈತರು ಸಹ ಆರ್ಥಿಕವಾಗಿ ಸುಧಾರಣೆ ಆಗಿದ್ದು, ಗ್ರಾಮೀಣ ಭಾಗದ ದೈವ, ದೇವಸ್ಥಾನಗಳ ಜೀರ್ಣೋದ್ಧಾರಲ್ಲೂ ಅವರು ದೊಡ್ಡದೊಡ್ಡ ಸಹಕಾರ ನೀಡುತ್ತಿದ್ದಾರೆ ಎಂದರು.
ಭಕ್ತಾಧಿಗಳ ಸಹಕಾರದಿಂದ ಗುಡಿಯ ನಿರ್ಮಾಣ ಸಭೆಯ ಅಧ್ಯಕ್ಷತೆ ವಹಿಸಿದ್ದ ಭಜನಾ ಮಂಡಳಿಯ ಅಧ್ಯಕ್ಷ ಪಿ.ರಮೇಶ್ ಪೂಜಾರಿ ಪಡ್ಡಾಯಿಮಜಲು ಅವರು ಮಾತನಾಡಿ, ಭಜನಾ ಮಂಡಳಿಯ ಸುವರ್ಣ ಸಂಭ್ರಮದಲ್ಲಿ ನೂತನ ಮಂದಿರದ ನಿರ್ಮಾಣಕ್ಕೆ ಮುಂದಾಗಿದ್ದೇವೆ.ಗ್ರಾಮಸ್ಥರೆಲ್ಲರ ಸಹಕಾರದಿಂದ ಮಂದಿರದ ಪುನರ್ ನಿರ್ಮಾಣ ಶೀಘ್ರಗತಿಯಲ್ಲಿ ನಡೆಯುವ ವಿಶ್ವಾಸವಿದೆ ಎಂದರು. ಮಾರೂರು ಖಂಡಿಗದ ವೇ|ಮೂ| ರಾಮದಾಸ ಅಸ್ರಣ್ಣರು ಭೂಮಿಪೂಜೆಯ ವಿಧಿ ವಿಧಾನ ನೆರವೇರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಯೋಜನಾಧಿಕಾರಿ ದಯಾನಂದ, ಮಂಗಳೂರಿನ ಉದ್ಯಮಿ ಆನಂದ ಶೆಟ್ಟಿ ಅಡ್ಯಾರು, ಮುದ್ದಾಡಿ ಕ್ಷೇತ್ರದ ಆಡಳಿತದಾರರಾದ ಯಂ.ವಿಜಯರಾಜ ಅಧಿಕಾರಿ ಮಾರಗುತ್ತು, ಸುರೇಶ್ ಕುಮಾರ್ ಆರಿಗ ಪೆರ್ಮಾಣುಗುತ್ತು, ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಭಜನಾ ಮಂಡಳಿ ಗೌರವ ಸಲಹೆಗಾರ ಲಕ್ಷ್ಮೀನಾರಾಯಣ ಆಚಾರ್ಯ ಪೊಕ್ಕಿ, ಗೌರವಾಧ್ಯಕ್ಷ ಶಾಂತಿರಾಜ ಜೈನ್ ಕೊಡಂಗೆ, ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಲಕ್ಷ್ಮೀ ಪದ್ಮಪೂಜಾರಿ ಗುಂಡೂರಿ, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ಭಜನ ಮಂದಿರದ ಪ್ರ.ಅರ್ಚಕರಾದ ಕೃಷ್ಣ ಭಟ್, ಗುಂಡೂರಿ ಹಾಲು ಉ.ಸ. ಸಂಘದ ಅಧ್ಯಕ್ಷ ಕುಮಾರು ಹೆಗ್ಡೆ, ಉದ್ಯಮಿಗಳಾದ ಲೋಕೇಶ್ ಪೂಜಾರಿ ಕೋರ್ಲೋಡಿ, ಸದಾನಂದ ಪೂಜಾರಿ ಗುಂಡೂರಿ, ಭಜನ ಮಂಡಳಿ ಕೋಶಾಧಿಕಾರಿ ರಾಜು ಪೂಜಾರಿ, ಗುಂಡೂರಿಯ ಸೇವಾಪ್ರತಿನಿಧಿ ಹರೀಶ್ ಬಾಡಾರು ಉಪಸ್ಥಿತರಿದ್ದರು.
ಹರೀಶ್ ಕುಮಾರ್ ಪೊಕ್ಕಿ ಸ್ವಾಗತಿಸಿ, ಭಜನ ಮಂಡಳಿ ಕಾರ್ಯದರ್ಶಿ ಸತೀಶ್ ಕುಲಾಲ್ ವಂದಿಸಿದರು. ಗುಣಪ್ರಸಾದ್ ಕಾರಂದೂರು ನಿರ್ವಹಿಸಿದರು.