Site icon Suddi Belthangady

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಯವರ 106ನೇ ಜಯಂತಿ ಆಚರಣೆ

ಬೆಳ್ತಂಗಡಿ: ದೇಶದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ 106ನೇ ಜಯಂತಿ ಯನ್ನು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಣೆ ಮಾಡಲಾಯಿತು.

ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೇಖರ್ ಕುಕ್ಕೆಡಿ ಮಾತನಾಡಿ ಬ್ಯಾಂಕುಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿಯ ಮೂಲಕ ಭಾರತದ ಆರ್ಥಿಕಾಭಿವೃದ್ಧಿಗೆ ಮುನ್ನುಡಿ ಬರೆದ ದಿಟ್ಟ ನಾಯಕಿ ಇಂದಿರಾ ಅವರು ಭಾರತೀಯರ ಹೃದಯದಲ್ಲಿ ಸದಾ ಅಜರಾಮರ.ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದು ಬಡತನವನ್ನು ನಿರ್ಮೂಲನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಗರೀಬಿ ಹಠಾವೋ ಘೋಷಣೆಯ ಮೂಲಕ ಬಡಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಮಹಿಳೆಯರಿಗೆ, ರೈತರಿಗೆ ಹಲವು ಯೋಜನೆಗಳನ್ನು ರೂಪಿಸಿದ್ದರು. ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ, ಭೂರಹಿತರಿಗೆ ಭೂಮಿಯ ಒಡೆತನ ಸಿಗುವಂತೆ ಮಾಡಿದರು.ರಾಜಧನ ರದ್ದು, ಬ್ಯಾಂಕುಗಳ ರಾಷ್ಟ್ರೀಕರಣ ಇವರ ಕಾಲದ ಪ್ರಮುಖ ಸುಧಾರಣೆಗಳಾಗಿವೆ.ಬಡವರಿಗೆ ಬ್ಯಾಂಕುಗಳ ಸೌಲಭ್ಯ ಸಿಗುವಂತೆ ಮಾಡಿದವರು ಇಂದಿರಾ ಗಾಂಧಿ. ಈ ಎಲ್ಲ ಕಾರ್ಯಕ್ರಮಗಳ ಪರಿಣಾಮವಾಗಿ ಜನ ಅವರನ್ನು ದೇವತೆಯಂತೆ ಕಾಣುತ್ತಿದ್ದರು ಎಂದು ಅವರು ಹೇಳಿದರು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಬಂಗೇರ ಕಾಶಿಪಟ್ಣ ಸ್ವಾಗತಿಸಿ, ಗ್ರಾಮೀಣ ಅಧ್ಯಕ್ಷ ಕೆ.ಎಮ್.ನಾಗೇಶ್ ಕುಮಾರ್ ಗೌಡ ಶುಭ ಹಾರೈಸಿದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷರಾದ ಮಹಮ್ಮದ್ ಹನೀಪ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಶೋಭಾ ನಾರಾಯಣ ಗೌಡ, ಯುವ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಹಕಿಮ್ ಕೊಕ್ಕಡ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿದೇವ್ ಅರಿಗ ಹಾಗೂ ಪಕ್ಷದ ಪ್ರಮುಖರಾದ ಯಶೋಧರ ಚಾರ್ಮಾಡಿ, ಕುಶಾಲಪ್ಪ ಗೌಡ, ರೇವತಿ ಲಾಯಿಲ, ಶಿರ್ಲಾಲು, ಬೊಮ್ಮಣ್ಣ ಗೌಡ ಪುದುವೆಟ್ಟು, ಕರೀಮ್ ಗೇರುಕಟ್ಟೆ, ನವೀನ್ ಗೌಡ ಸವಣಾಲು, ಶಾಹಿರ ಬಾನು ಮಾಲಾಡಿ, ರಜತ್ ಗೌಡ ಉಜಿರೆ, ಸುಧೀರ್ ದೇವಾಡಿಗ, ಮಹಮ್ಮದ್ ಸಿದ್ದಿಕ್ ಮಲೆಬೆಟ್ಟು, ಸಂತೋಷ ಕುಕ್ಕೆಡಿ ಉಪಸ್ಥಿತರಿದ್ದರು.

Exit mobile version