ಕೊಕ್ಕಡ: ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) , 2.5 ಎನ್.ವಿ. ಜಿ. ಸುರತ್ಕಲ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಜರುಗಿತು. ನವೆಂಬರ್ 19 ರಂದು ಕೌಕ್ರಾಡಿ ಸಂತ ಜಾನರ ಶಾಲಾ ಸಭಾಂಗಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ರಫಾಯಲ್ ಸ್ಟ್ರೆಲ್ಲಾ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಆರೋಗ್ಯಾಧಿಕಾರಿ ಹಾಗೂ ವ್ಯವಸ್ಥಾಪನಾಧಿಕಾರಿ ಡಾ. ಹೇಮಚಂದ್ರ ಅವರು ಶಿಬಿರದ ಕುರಿತು ಮಾಹಿತಿ ನೀಡಿದರು. ಯುವಜನ ಆಯೋಗದ ಸಂಚಾಲಕಿ ಜೆಸಿಂತಾ ಡಿ ಸೋಜ ಸ್ವಾಗತಿಸಿದರು. ಜೇಸಿಐ ಕೊಕ್ಕಡ ಕಪಿಲಾ ಅಧ್ಯಕ್ಷರಾದ ಶ್ರೀ ಜಿತೇಶ್ ಎಲ್ ಪಿರೇರಾ ಅವರು ಶುಭ ಹಾರೈಸಿದರು. ಅಪೋಲಿನಾ ಮಾರ್ಟಿಸ್ ಪ್ರಾರ್ಥಿಸಿದರು. ಸಹನಾ ಮರಿಯಾ ನಿರೂಪಿಸಿದರು.
ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದ ಧರ್ಮಗುರು ವಂ. ಜಗದೀಶ್ ಪಿಂಟೋ, ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಎ. ಶೇಷಪ್ಪ ಗೌಡ, ನಿರ್ದೇಶಕ ಬಿ. ಶೇಷಪ್ಪ ಗೌಡ, ಕಾರ್ಯದರ್ಶಿ ಫೆಲ್ಸಿ ವೇಗಸ್, ದೇವಾಲಯದ ಆಯೋಗಗಳ ಸಂಯೋಜಕಿ ವಿನ್ನಿ ಫ್ರೆಡ್ , ಆರೋಗ್ಯ ಆಯೋಗದ ಸಂಚಾಲಕಿ ರೋಜಲಿನ್ ಪಾಯಸ್, ಕಾರ್ಮಿಕ ಆಯೋಗ ಸದಸ್ಯರು, ಕೊಕ್ಕಡ ಜೇಸಿಐ ಪದಾಧಿಕಾರಿಗಳು, ಪಾಲನಾ ಸಮಿತಿಯ ಉಪಾಧ್ಯಕ್ಷ ನೋಯೆಲ್ ಮೊಂತೆರೋ ಉಪಸ್ಥಿತರಿದ್ದರು.