ತಣ್ಣೀರುಪಂತ: ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘ ತಣ್ಣೀರುಪಂತ, ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಇದರ ಸಂಯುಕ್ತ ಆಶ್ರಯದಲ್ಲಿ ೧೦ನೇ ವರ್ಷದ ಗುರುಪೂಜೆ ನ.೧೯ರಂದು ತಣ್ಣೀರುಪಂತ ಶ್ರೀ ಶಾರದಾಂಬ ಭಜನಾ ಮಂದಿರದ ವಠಾರದಲ್ಲಿ ನಡೆಯಿತು. ಅಶೋಕ್ ಶಾಂತಿ ಪಾಲೇದು ಅವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ನೇರವರಿತು .ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಲಕೃಷ್ಣ ಅಳಕ್ಕೆ ವಹಿಸಿದ್ದರು. ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ.ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ.ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ ಕಲ್ಲಾಪು, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ನಿತೀಶ್ ಹೆಚ್, ತಣ್ಣೀರುಪಂತ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಲೋಕೇಶ್ ಅಳಕ್ಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯ ಅಧ್ಯೆಕ್ಷೆ ಮಮತಾ ಯೋಗಿಶ್ ಮತ್ತು ಮಡಂತ್ಯಾರು ಗ್ರಾ.ಪಂ.ಅಧ್ಯೆಕ್ಷೆ ರೂಪ ನವೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುರು ಪೂಜೆ ಅಂಗವಾಗಿ ಗ್ರಾಮ ಹಾಗೂ ಸ್ಥಳೀಯ ಬಿಲ್ಲವ ಸಮಾಜ ಭಾಂದವರಿಗೆ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಪುರುಷರಿಗೆ ವಾಲಿಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ಇತ್ಯಾದಿ, ಮಹಿಳೆಯರಿಗೆ ತ್ರೋಬಾಲ್, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಇತ್ಯಾದಿ ಮತ್ತು ಮಕ್ಕಳಿಗೆ ವಿವಿಧ ಸಣ್ಣ ಪುಟ್ಟ ಆಟೋಟ ಸ್ಪರ್ಧೆಗಳು ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ವಿಜೇತಾರಿಗೆ ಬಹುಮಾನವನ್ನು ವಿತರಿಸಲಾಯಿತು.ಬಳಿಕ ಪೂಜೆಯ ಪ್ರಸಾದ ವಿತರಿಸಿ ಅನ್ನಸಂತರ್ಪಣೆ ನಡೆಯಿತು. ಯೋಗಿಶ್ ಕುಮಾರ್ ಅಳಕ್ಕೆ. ಸ್ವಾಗತಿಸಿ , ರುದ್ರಗಿರಿ ಮೃತ್ಯುಂಜಯ ದೇವಸ್ಥಾನ ಕಾರ್ಯದರ್ಶಿ ದೇಜಪ್ಪ ಪೂಜಾರಿ ಅಳಕ್ಕೆ ವಂದಿಸಿದರು. ಕಾರ್ಯಕ್ರಮವನ್ನು ಬಡಗಕಜೆಕಾರು ಗ್ರಾ.ಪಂ.ಅಧ್ಯಕ್ಷ ದೇವದಾಸ್ ಕಜೆಕಾರ್ ನಿರೂಪಿಸಿದರು.