Site icon Suddi Belthangady

ಮೈರೋಳ್ತಡ್ಕ: ಸ.ಉ.ಪ್ರಾ.ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಮೈರೊಳ್ತಡ್ಕ: ಸರಕಾರಿ ಉನ್ನತೀಕರಿಸಿದ ಪ್ರಾ.ಶಾಲೆ ಮೈರೋಳ್ತಡ್ಕ ಇದರ ಪ್ರತಿಭಾ ಪುರಸ್ಕಾರ ಸಮಾರಂಭವು ನ.17 ರಂದು ನಡೆಯಿತು.

ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಆಧ್ಯಕ್ಷರು ಆಗಿರುವ ದಿನೇಶ್ ಖಂಡಿಗ ವಂದಿಸಿದರು.

ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಕೃಷ್ಣಯ್ಯ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ಎಸ್.ಡಿ.ಎಮ್.ಸಿ ಅಧ್ಯಕ್ಷ ಬಾಬುಗೌಡ, ಊರಿನ ದಾನಿಗಳಾದ ಧರ್ಮಪ್ಪ ಗೌಡ ಅಂಡಿಲ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತವಿಕ ವರದಿ ವಾಚಿಸಿದರು.ಶಿಕ್ಷಕರಾದ ಶ್ರೀಧರ ಎಲ್ಲರನ್ನೂ ಸ್ವಾಗತಿಸಿ, ರಾಜಶ್ರೀ, ನಿವೇದಿತಾ, ಸುಶೀಲ, ಆರ್ಚನ ಸಹಕರಿಸಿದರು.ಪ್ರಭು ನಾಯಕ್ ಧನ್ಯವಾದ ನೀಡಿದರು.

Exit mobile version