ಕಳೆಂಜ ಗ್ರಾಮದ ಶಿಬರಾಜೆ ಗುತ್ತಿಮಾರ್ ನಿವಾಸಿ ಅನಿತಾ ಮತ್ತು ರೋಹಿತ್ ಶೆಟ್ಟಿಯವರ ಪುತ್ರಿ ಆರ್ವಿ ಶೆಟ್ಟಿಯ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ಪಾದೆ ಶಿಬರಾಜೆ ಅಂಗನವಾಡಿಗೆ ಮಕ್ಕಳು ಕುಳಿತುಕೊಳ್ಳುವ ಕುರ್ಚಿಯನ್ನು ಕೊಡುಗೆಯಾಗಿ ನ.15 ರಂದು ನೀಡಿದರು.
ಈ ಸಂದರ್ಭದಲ್ಲಿ ದೇವರು ಅವರಿಗೆ ಇನ್ನಷ್ಟು ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಶಕ್ತಿಯನ್ನು ನೀಡಲಿ ಹಾಗೂ ಮಗುವಿನ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಶಾಲಾ ಪರವಾಗಿ ಹಾರೈಸಲಾಯಿತು.
ಮಗುವಿನ ಚಿಕ್ಕಪ್ಪ ಅಕ್ಷತ್ ರೈ ಹಾಗೂ ಅಜ್ಜಿ ಸುಖಲತಾರವರು ಕುರ್ಚಿಯನ್ನು ಕಾಯಕರ್ತೆ ಪ್ರಿಯಾ ಹಾಗೂ ಸಹಾಯಕಿ ಅನ್ಸಿಲ್ಲಾ ಮತ್ತು ಮಕ್ಕಳ ಸಮ್ಮುಖದಲ್ಲಿ ಹಸ್ತಾಂತರಿಸಿದರು.