ಬೆಳಾಲು: ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಮಾಯ ಮಹದೇವ ದೇವಸ್ಥಾನದ ವಠಾರದಲ್ಲಿ ನ.15 ರಂದು ನಡೆದ 41 ನೇ ವರ್ಷದ ಆಟೋಟ ಸ್ಪರ್ಧೆಯ ಸಮಾರೋಪ ಸಮಾರಂಭ, ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್.ಪದ್ಮ ಗೌಡ, ಕೊಯ್ಯೂರು ಸರಕಾರಿ ಪ. ಪೂ. ಕಾಲೇಜು ಪ್ರಭಾರ ಪ್ರಾಂಶುಪಾಲ ಮೋಹನ ಗೌಡ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ, ಮಂಗಳೂರು ಲೋಕಾಯುಕ್ತ ಘಟಕ ಪೊಲೀಸ್ ವೈಶಾಲಿ, ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್, ಕೊಲ್ಪಾಡಿ ಶ್ರೀ ಸುಬ್ರಹ್ಮಣೆಶ್ವರ ಭಜನಾ ಮಂಡಳಿಯ ಅಧ್ಯಕ್ಷ ಸದಾಶಿವ ಮೈರಾಜೆ, ಅನಂತೋಡಿ ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಉಪಾಧ್ಯಕ್ಷ ಹರೀಶ್ ಪೊಸೊಟ್ಟು ಭಾಗವಹಿಸಿದ್ದರು.
ಸನ್ಮಾನ: ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಗೈದ ಕು.ಜೀವನಾ ಮರಿಪಾಡಿಪಲ್ಕೆ, ಕು.ಲಿಖಿತ, ನಾಟಿ ವೈದ್ಯ ನೀಲಯ್ಯ ಗೌಡ ಪರಾರಿ ಇವರನ್ನು ಸನ್ಮಾನಿಸಲಾಯಿತು.
ತೀರ್ಪುಗಾರರಾಗಿ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಕೃಷ್ಣಾನಂದ ರಾವ್, ಧರ್ಮೇಂದ್ರ ಕುಮಾರ್, ರವಿಚಂದ್ರ ಜೈನ್, ಮಾಯ ಶಾಲಾ ಶಿಕ್ಷಕ ಯೋಗೀಶ್ ಎಚ್.ಆರ್., ಶಿಕ್ಷಕಿ ಜ್ಯೋತಿ ಎಂ.ಎಸ್., ಮೋಹನ ಗೌಡ ಮಾಚಾರು, ರಾಜ್ಯ ಕಬಡ್ಡಿ ತೀರ್ಪುಗಾರ ಶಶಿಧರ ಓಡಿಪ್ರೊಟ್ಟು, ಸುಂದರ ಎಂ.ಕೆ. ಬೆಳಾಲು, ಭಜನಾ ಮಂಡಳಿಯ ಗೌರವ ಅಧ್ಯಕ್ಷ ಕೃಷ್ಣಪ್ಪ ಗೌಡ ಬೆರ್ಕೆಜಾಲು, ಉಪಾಧ್ಯಕ್ಷ ಶಶಿಧರ್ ಗೊಲ್ಲ, ಜತೆ ಕಾರ್ಯದರ್ಶಿ ಶೋಭಿತ್ ಪೆಲತ್ತಡಿ, ಭಜನಾ ಸಹ ಸಂಚಾಲಕ ಸುರೇಶ ಕನಿಕ್ಕಿಲ, ಮಹಿಳಾ ಸಂಚಾಲಕಿ ಸುಜಾತಾ, ಸಹ ಸಂಚಾಲಕಿ ವಸಂತಿ ಪರಾರಿ, ಕ್ರೀಡಾ ಸಂಚಾಲಕ ಶಶಿಧರ್ ಆಚಾರ್ಯ ಶಿಲ್ಪಿ, ಸಹ ಸಂಚಾಲಕ ರಂಜನ್ ಕುಮಾರ್ ಮತ್ತು ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು,ಸ್ಪರ್ಧಿಗಳು, ಊರವರು ಹಾಜರಿದ್ದರು.
ಭಜನಾ ಮಂಡಳಿಯ ಕೋಶಾಧಿಕಾರಿ ಗಣೇಶ್ ಕನಿಕ್ಕಿಲ ಸ್ವಾಗತಿಸಿ, ಕಾರ್ಯದರ್ಶಿ ಶಿವಪ್ರಸಾದ್ ಕಪ್ಪೆಹಳ್ಳ ವಂದಿಸಿದರು.ಭಜನಾ ಸಂಚಾಲಕಿ ಭವಾನಿ ಮಾರ್ಪಲು ವಿಜೇತರ ಪಟ್ಟಿ ವಾಚಿಸಿ, ರಚನಾ ಮಂಜುಶ್ರೀ ನಿರೂಪಿಸಿದರು