Site icon Suddi Belthangady

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜಿನಲ್ಲಿ ಇಂಟರ್ ಕ್ಲಬ್ ಫೆಸ್ಟ್ ‘ಆರಂಭಂ’

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜು ನಿಟ್ಟಡೆ ಇಲ್ಲಿ ಇಂಟರ್ ಕ್ಲಬ್ ಫೆಸ್ಟ್ ‘ಆರಂಭಂ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ರಂಗೋಲಿ, ಚಿತ್ರ ಬಿಡಿಸುವುದು, ನಿಧಿ ಹುಡುಕುವುದು, ಬೆಂಕಿ ಇಲ್ಲದೆ ಅಡುಗೆ, ರಸಪ್ರಶ್ನೆ ಉಪಕರಣಗಳ ತಯಾರಿ, ಕಥೆ ಹೇಳುವುದು, ಸಂಗೀತ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಬೇರೆ ಬೇರೆ ಸ್ಪರ್ಧೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಮ್ಮ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಎಚ್ ಮತ್ತು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಶ್ವಿತ್ ಕುಲಾಲ್ ಬಹುಮಾನವನ್ನು ವಿತರಿಸಿದರು.ವಾರ್ಷಿಕ ಚಾಂಪಿಯನ್ ಶಿಪ್‌ನ್ನು ವಿಜ್ಞಾನ ಕ್ಲಬ್ ಪಡೆದುಕೊಂಡಿರುತ್ತದೆ.ಸಾಂಸ್ಕೃತಿಕ ಕ್ಲಬ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಜಿ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಕ್ಷತಾ, ಕಿರಿಯ ವಿಭಾಗದ ಮುಖ್ಯ ಶಿಕ್ಷಕಿ ಪವಿತ್ರ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ರಾವ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಾಲೇಜಿನ ಉಪನ್ಯಾಸಕಿ ಪ್ರಜ್ಞ, ಪ್ರೌಢಶಾಲಾ ಶಿಕ್ಷಕಿ ಗೌತಮಿ, ಕಿರಿಯ ಪ್ರಾಥಮಿಕ ಶಿಕ್ಷಕಿ ಭವಾನಿ ದಿವ್ಯ ಈ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.

Exit mobile version