Site icon Suddi Belthangady

ಅಳದಂಗಡಿ: ದೀಪಾವಳಿ ಸಂಭ್ರಮಕ್ಕೆ ಪಿಲಿನಲಿಕೆ

ಅಳದಂಗಡಿ: ಇಲ್ಲಿ ದೀಪಾವಳಿ ಸಂಭ್ರಮದಂದು ಡಾ.ಶಶಿಧರ ಡೋಂಗ್ರೆ ಸೇನೆರೆಬೈಲು ಇವರ ಪ್ರಾಯೋಜಕತ್ವದಲ್ಲಿ ವಿಶೇಷವಾಗಿ ಪಿಲಿನಲಿಕೆ ಕಾರ್ಯಕ್ರಮ ನಡೆಯಿತು.

ವಿಶೇಷ ಕಾರ್ಯಕ್ರಮದಲ್ಲಿ ಮೂಡಬಿದ್ರೆ ಅಲಂಗಾರುವಿನ ಪಿಲಿತಂಡ ನೆರೆದಿರುವ ಜನ ಸಮೂಹವನ್ನು ಆಕರ್ಷಣೆ ಮಾಡಿತು.
ಈ ಸಂದರ್ಭದಲ್ಲಿ ಡಾ.ಶಶಿಧರ ಡೋಂಗ್ರೆ, ಡಾ.ಸುಷ್ಮಾ ಡೋಂಗ್ರೆ ಮತ್ತು ಮಕ್ಕಳು, ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ಪೇಟೆಯ ಸಮಸ್ತ ಜನತೆ, ಭಾಗವಹಿಸಿ ಹುರಿದುಂಬಿಸಿದರು.

Exit mobile version