ಬೆಳಾಲು: ಇಲ್ಲಿಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡಯುವ 41 ನೇ ವರ್ಷದ ಆಟೋಟ ಸ್ಪರ್ಧೆಯನ್ನು ಶ್ರೀ ಮಾಯ ಮಹದೇವ ದೇವಸ್ಥಾನದ ವಠಾರದಲ್ಲಿ ನ.15 ರಂದು ದೇವಸ್ಥಾನದ ಅರ್ಚಕ ಕೇಶವ ರಾಮಯಾಜಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಜಯಂತಿ, ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಸೇವಾ ಪ್ರತಿನಿಧಿ ಆಶಾ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಮಮತಾ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರಮೇಶ್ ಗೌಡ ಮರಕ್ಕಡ, ದೇವಸ್ಥಾನದ ಕಚೇರಿ ವ್ಯವಸ್ಥಾಕ ಶೇಖರ ಗೌಡ ಕೊಲ್ಲಿಮಾರು, ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ ಕುದ್ರಾಲು, ಗೌರವ ಅಧ್ಯಕ್ಷ ಕೃಷ್ಣಪ್ಪ ಗೌಡ ಬೆರ್ಕೆಜಾಲು, ಕಾರ್ಯದರ್ಶಿ ಶಿವಪ್ರಸಾದ್ ಕಪ್ಪೆಹಳ್ಳ, ಉಪಾಧ್ಯಕ್ಷ ಶಶಿಧರ್ ಗೊಲ್ಲ, ಜತೆ ಕಾರ್ಯದರ್ಶಿ ಶೋಭಿತ್ ಪೆಲತ್ತಡಿ, ಗೌರವ ಸಲಹೆಗಾರ ನಾರಾಯಣ ಮಡಿವಾಳ, ಭಜನಾ ಸಂಚಾಲಕಿ ಭವಾನಿ ಮಾರ್ಪಾಲು, ಸಹ ಸಂಚಾಲಕ ಗಣೇಶ್ ಕನಿಕ್ಕಿಲ, ಮಹಿಳಾ ಸಂಚಾಲಕಿ ಸುಜಾತಾ, ಸಹ ಸಂಚಾಲಕಿ ವಸಂತಿ ಪರಾರಿ, ಕ್ರೀಡಾ ಸಂಚಾಲಕ ಶಶಿಧರ್ ಆಚಾರ್ಯ ಶಿಲ್ಪಿ, ಸಹ ಸಂಚಾಲಕ ರಂಜನ್ ಕುಮಾರ್ ಮತ್ತು ಪದಾಧಿಕಾರಿಗಳು, ಸದಸ್ಯರು, ತೀರ್ಪುಗಾರರು, ಸ್ಪರ್ಧಿಗಳು, ಊರವರು ಹಾಜರಿದ್ದರು.
ಬಳಿಕ ವಿವಿಧ ವಿಭಾಗದ ವಿವಿಧ ಆಟೋಟ ಸ್ಪರ್ಧೆಗಳು ಜರಗಿತು.