ಅರಸಿನಮಕ್ಕಿ: ಲತೇಶ್ ಯಕ್ಷಗಾನ ನಾಟ್ಯ ಕಲಾಕೇಂದ್ರದ 5ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಠಾರದ ದಿ.ಅಡ್ಕಾಡಿ ಜಗನ್ನಾಥ ಗೌಡ ವೇದಿಕೆಯಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾನೆಯನ್ನು ಅರಸಿನಮಕ್ಕಿಯ ಉದ್ಯಮಿಗಳಾದ ವಾಮನ ತಾಮನ್ಕರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಾಯಂಕಾಲ 5.30 ಕ್ಕೇ ಚೌಕಿಪೂಜೆ ಮತ್ತು ಗೆಜ್ಜೆಪೂಜೆ ನೆರವೇರಿತು.ನಂತರ ಪೂರ್ವ ರಂಗತ್ರಯ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಜ್ಯೋತಿಷಿ ಶ್ರೀಧರ ಗೋರೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ,ಬಾಲಕೃಷ್ಣ ನೈಮಿಷ, ಚಂದ್ರಶೇಖರ ಗೌಡ ದರ್ಮದಕಳ, ಜಯಾನಂದ ಬಂಟ್ರಿಜಾಲ್, ಧರ್ಮರಾಜ ಗೌಡ ಆಡ್ಕಾಡಿ, ಕೃಷ್ಣಪ್ಪ ಮೂಲ್ಯ, ಸುಂದರ ಗೌಡ ಮುಳಿತ್ತಡ್ಕ ವರದಶಂಕರ ದಾಮ್ಲೆ, ಶ್ರೀರಾಮ ದಾಮ್ಲೆ ರವರ ಉಪಸ್ಥಿತಿಯಲ್ಲಿ ನಡೆಯಿತು.
ನಿವೃತ ಮುಖ್ಯ ಶಿಕ್ಷಕರು ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಶ್ರೀರಾಮ ದಾಮ್ಲೆಯವರನ್ನು ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.
ವೃತ್ತಿ ಕಲಾವಿದರಾದ ಜಯರಾಮ ಅಡೂರು ರವರನ್ನು ಕಲಾಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.ಮಾತೃಶ್ರಿ ರವರನ್ನು ಕಳೆದುಕೊಂಡಿದ್ದರು ಚಿಕ್ಕ ವಯಸ್ಸಿಗೆ ಕಲಾಸಾಧನೆ ಮಾಡುತ್ತಿರುವ ಗಾನ್ವಿ, ಗಗನ್, ಚೈತ್ರೇಶ್, ಚೇತನ್ ಮತ್ತು ತಂದೆಯನ್ನು ಕಳೆದುಕೊಂಡ ಭಾಗ್ಯಲಕ್ಷ್ಮಿ ಅವರನ್ನು ಕೂಡ ಕೇಂದ್ರದ ವತಿಯಿಂದ ಧನ ಸಹಾಯ ನೀಡಿ ಗೌರವಿಸಲಾಯಿತು.
ಅಪಘಾತವಾಗಿ ವಿಶ್ರಾಂತರಾಗಿರುವ ಕಲಾಕೇಂದ್ರದ ಪೋಷಕ ಪ್ರತಿನಿಧಿ ಹರೀಶ್ ಗೌಡ ಉಡ್ಯೇರೆ ಅವರಿಗೂ ಧನ ಸಹಾಯ ನೀಡಿ ಗೌರವಿಸಲಾಯಿತು.
ಪ್ರಾರ್ಥನೆಯನ್ನು ದಿಶಾ ಶಿಶಿಲ, ಸ್ವಾಗತವನ್ನು ಧರ್ಮರಾಜ ಗೌಡ ಆಡ್ಕಾಡಿ, ಪ್ರಸ್ತಾವನೆಯನ್ನು ಪ್ರವೀಣ ವೇಣಿ ಶಿಬಾಜೆ ಧನ್ಯವಾದವನ್ನು ಸುಂದರ ಗೌಡ ಮುಳಿತ್ತಡ್ಕ ಕಾರ್ಯಕ್ರಮದ ನಿರೂಪಣೆಯನ್ನು ಪ್ರವೀಣ್ ಕುಲಾಲ್ ನೆರವೇರಿಸಿದರು.ನಂತರ ಸಂಸ್ಥೆಯ ಮಕ್ಕಳಿಂದ ಶನೀಶ್ವರ ಮಹಾತ್ಮೆ ಪೌರಾಣಿಕ ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟ ನಡೆಯಿತು.