ಉಜಿರೆ: ದ.ಕ.ಜಿಲ್ಲಾ ತುಳು ಶಿವಳ್ಳಿ ಬ್ರಾಹ್ಮಣ ಸಂಘ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ(ರಿ), ತುಳು ಶಿವಳ್ಳಿ ತಾಲೂಕು ಮಹಿಳಾ ಘಟಕ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಶಿವಳ್ಳಿ ಯುವ ವಿಪ್ರ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 11 ಜನರ ಜಿಲ್ಲಾ ಮಟ್ಟದ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ “ವಿಪ್ರ ಕಪ್ -2” ನ.11 ರಂದು ಉಜಿರೆ ಅಜ್ಜರಕಲ್ಲು ಕ್ರೀಡಾಂಗಣದಲ್ಲಿ ನಡೆಯಿತು.
ಕ್ರಿಕೆಟ್ ಪಂದ್ಯಾಟವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಹಾಗು ತುಳು ಶಿವಳ್ಳಿ ಉಜಿರೆ ವಲಯಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದ.ಕ.ಜಿಲ್ಲಾ ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ!ಎಂ.ಎಂ.ದಯಾಕರ್ ಅಧ್ಯಕ್ಷತೆ ವಹಿಸಿ ಶುಭ ಕೋರಿದರು.
ವೇದಿಕೆಯಲ್ಲಿ ಉಜಿರೆ ವಲಯಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ತಾಲೂಕು ತುಳು ಶಿವಳ್ಳಿ ಮಹಿಳಾ ಘಟಕಾಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ, ಮಹಿಳಾ ಘಟಕ ಉಜಿರೆ ವಲಯಾಧ್ಯಕ್ಷೆ ಸರೋಜಾ ಕೆದಿಲಾಯ, ನಿವೃತ್ತ ಅರಣ್ಯಾಧಿಕಾರಿ ಗಣೇಶ್ ತಂತ್ರಿ, ತಾಲೂಕು ಯುವ ವಿಪ್ರ ವೇದಿಕೆ ಅಧ್ಯಕ್ಷ ದುರ್ಗಾಪ್ರಸಾದ್ ಕೆರ್ಮುಣ್ಣಾಯ, ಯುವ ವಿಪ್ರ ವೇದಿಕೆ ಉಜಿರೆ ವಲಯಾಧ್ಯಕ್ಷ ಸೂರ್ಯನಾರಾಯಣ ಮುರುಡಿತ್ತಾಯ ಉಪಸ್ಥಿತರಿದ್ದರು.
ತುಳು ಶಿವಳ್ಳಿ ಉಜಿರೆ ವಲಯ ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
ವಿಜೇತ ತಂಡಗಳಿಗೆ ಮುಖ್ಯ ಅತಿಥಿಗಳು ವಿಪ್ರ ಟ್ರೋಫಿ ಹಾಗೂ ನಗದು ಪುರಸ್ಕಾರ ವಿತರಿಸಿದರು.
ವಿಪ್ರ ಟ್ರೋಫಿ: ಕ್ರಿಕೆಟ್ ಪಂದ್ಯಾಟದಲ್ಲಿ ರಾಮಕುಂಜ ಶಿವಳ್ಳಿ ಸ್ವೈಪರ್ಸ್ ತಂಡ ಪ್ರಥಮ ಸ್ಥಾನ ಪಡೆದು ,ವಿಪ್ರ ಕಪ್ ಸಹಿತ ರೂ 15,022=ನಗದು ಪುರಸ್ಕಾರ ಪಡೆದರು. ಪುತ್ತೂರು ಶಿವಳ್ಳಿ ಕ್ರಿಕೆಟರ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದು ವಿಪ್ರ ಟ್ರೋಫಿ ಸಹಿತ ರೂ 10,022 ನಗದು ಪುರಸ್ಕಾರ ಪಡೆದರು.
ಅತ್ತ್ಯುತ್ತಮ ಬೌಲರ್ ಆಗಿ ಪುತ್ತೂರು ಶಿವಳ್ಳಿ ತಂಡದ ಜಗ್ಗು, ಅತ್ತ್ಯುತ್ತಮ ಬ್ಯಾಟ್ಸ್ ಮೆನ್ ಆಗಿ ಪುತ್ತೂರು ಶಿವಳ್ಳಿ ತಂಡದ ಗಣಪತಿ ಹಾಗೂ ರಾಮಕುಂಜ ಶಿವಳ್ಳಿ ಸ್ವೈಪರ್ಸ್ ತಂಡದ ವಿಷ್ಣು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಕ್ರೀಡಾಕೂಟದಲ್ಲಿ ಜಿಲ್ಲೆಯ ಒಟ್ಟು 8 ತಂಡಗಳು ಭಾಗವಹಿಸಿದ್ದವು.