Site icon Suddi Belthangady

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜ್ ನಲ್ಲಿ ಮಾಹಿತಿ ತಂತ್ರಜ್ಞಾನದ ಉದ್ಘಾಟನಾ ಸಮಾರಂಭ

ಮಡಂತ್ಯಾರು: “ಪುಸ್ತಕಗಳು, ಒಳ್ಳೆಯ ಜನರು ಮತ್ತು ಒಳ್ಳೆಯ ಸ್ಥಳಗಳು ನಿಮ್ಮ ಜೀವನದ ಭಾಗವಾಗಿರಬೇಕು.ಪುಸ್ತಕಗಳು ನಿಮ್ಮನ್ನು ಪ್ರೇರೇಪಿಸುತ್ತವೆ.ನಿಮ್ಮನ್ನು ಪ್ರೇರೇಪಿಸುವ ಜನರೊಂದಿಗೆ ಬೆರೆಯಿರಿ.ಧನಾತ್ಮಕವಾಗಿರಲು ನಿಮ್ಮ ಮಿತಿಗಳಲ್ಲಿ ಇತರರಿಗೆ ಸಹಾಯ ಮಾಡಿ.ಹೆಚ್ಚು ಧನಾತ್ಮಕವಾಗಿ ಯೋಚಿಸಿದರೆ, ನೀವು ಹೆಚ್ಚು ಯಶಸ್ವಿಯಾಗುತ್ತೀರಿ.

ಉತ್ತಮ ಮತ್ತು ಸಕಾರಾತ್ಮಕ ಜೀವನಕ್ಕಾಗಿ ಸರಿಯಾದ ದಿಕ್ಕನ್ನು ಆರಿಸಿ, ಸ್ವಯಂ ಪ್ರೇರಿತರಾಗಿರಿ ಮತ್ತು ಇತರರ ಮೇಲೆ ಅವಲಂಬಿತರಾಗಬೇಡಿ” ಎಂಬುದಾಗಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಮಾಜಿಕ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಂದೀಶ್ ವೈ ಡಿ ನುಡಿದರು.

ಅವರು ನವೆಂಬರ್ 10ರಂದು ಸೇಕ್ರೆಡ್ ಹಾರ್ಟ್ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ ಮಾಹಿತಿ ತಂತ್ರಜ್ಞಾನ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ ತಮ್ಮ ಹಿತನುಡಿಗಳೊಂದಿಗೆ ಮಕ್ಕಳನ್ನು ಉತ್ತೇಜಿಸಿದರು.

ಗಣಕಯಂತ್ರ ವಿಭಾಗದ ಮುಖ್ಯಸ್ಥ ಜನಾರ್ಧನ ರಾವ್ ಡಿ ಸ್ವಾಗತಿಸಿ, ಮಾಹಿತಿ ತಂತ್ರಜ್ಞಾನದ ಸಂಯೋಜಕಿ ಜೆಸಿಂತಾ ಡಿಸೋಜ, ವಿದ್ಯಾರ್ಥಿ ಪ್ರತಿನಿಧಿಗಳಾದ ಯುನೀತ್ ಕೆ. ಮತ್ತು ರಾಬಿನ್ ಆಗುಸ್ಟಿನ್ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಮೇಲಾನಿ ನಿರೂಪಿಸಿ, ಶಿಕ್ಷಕಿ ಜೆಸಿಂತಾ ಡಿಸೋಜಾ ವಂದಿಸಿದರು.

Exit mobile version