Site icon Suddi Belthangady

ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಎನ್ನೆಸ್ಸೆಸ್ ಪ್ರಶಸ್ತಿ ಪುರಸ್ಕೃತರಿಗೆ ಸಮ್ಮಾನ

ಉಜಿರೆ: ಎಸ್.ಡಿ.ಎಂ.ಕಾಲೇಜಿನ ಎನ್ನೆಸ್ಸೆಸ್ ಘಟಕಕ್ಕೆ ಅತ್ಯುತ್ತಮ ಎನ್ನೆಸ್ಸೆಸ್ ಘಟಕ ರಾಜ್ಯ ಪ್ರಶಸ್ತಿ (2021-22) ಲಭಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ|ಬಿ.ಎ.ಕುಮಾರ ಹೆಗ್ಡೆ ಅವರಿಗೆ ಹಾಗೂ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪಡೆದ ಕಾಲೇಜಿನ ನಿಕಟಪೂರ್ವ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ|ಲಕ್ಷ್ಮೀನಾರಾಯಣ ಕೆ.ಎಸ್. ಅವರಿಗೆ ಅಭಿನಂದನಾ ಕಾರ್ಯಕ್ರಮವು ನ.8ರಂದು ನಡೆಯಿತು.

ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಎನ್ನೆಸ್ಸೆಸ್ ಘಟಕದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.(ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದರು.)
ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ|ಬಿ.ಎ. ಕುಮಾರ ಹೆಗ್ಡೆ, ಜೀವನದಲ್ಲಿ ಎನ್.ಎಸ್.ಎಸ್. ಆತ್ಮಸ್ಥೈರ್ಯವನ್ನು ಒದಗಿಸುತ್ತದೆ ಮತ್ತು ನಾಯಕತ್ವದ ಗುಣಗಳನ್ನು ವೃದ್ಧಿಸುತ್ತದೆ.ಎನ್ನೆಸ್ಸೆಸ್ ಸ್ವಯಂಸೇವಕರು ಅವಕಾಶಗಳನ್ನು ತಮ್ಮದಾಗಿಸಿಕೊಂಡು ಮುನ್ನುಗ್ಗಬೇಕು ಎಂದು ಹೇಳಿದರು.

ಡಾ|ಲಕ್ಷ್ಮೀನಾರಾಯಣ ಕೆ.ಎಸ್.ಅವರು ತಮ್ಮ ಮನದ ಮಾತುಗಳನ್ನು ಎನ್ನೆಸ್ಸೆಸ್ ಸ್ವಯಂಸೇವಕರ ಬಳಿ ಹಂಚಿಕೊಂಡರು. ಜೀವನದಲ್ಲಿ ಸದಾ ಮುನ್ನಡೆಯುತ್ತಲೇ ಇರಲು ಸರಿಯಾದ ತಯಾರಿ, ಕೆಲಸದಲ್ಲಿ ನಿಷ್ಠೆ ಹಾಗೂ ಅದರಲ್ಲಿ ನಮ್ಮ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ತಮ್ಮ ಜೊತೆ ಕೆಲಸ ಮಾಡಿದ ಎಲ್ಲಾ ಯೋಜನಾಧಿಕಾರಿಗಳನ್ನು ಸ್ಮರಿಸಿದ ಅವರು, ಎನ್ನೆಸ್ಸೆಸ್‌ನಲ್ಲಿ ಎಲ್ಲಾ ಕ್ಷಣಗಳು ಸ್ಮರಣೀಯ. ಎನ್ನೆಸ್ಸೆಸ್?ಗಾಗಿ ನಾನು ಎಂದಿಗೂ ಯಾವ ಸಹಾಯ ಮಾಡಲೂ ಸಿದ್ಧನಿzನೆ. ಎಂದೆಂದಿಗೂ ನಾನು ಕೂಡ ಒಬ್ಬ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ ಎಂದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರೊ.ದೀಪಾ ಆರ್.ಪಿ.ಉಪಸ್ಥಿತರಿದ್ದರು.ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿ, ಸ್ವಯಂಸೇವಕಿಯರಾದ ರಚನಾ ವಂದಿಸಿ, ಶ್ವೇತಾ ನಿರೂಪಿಸಿದರು.

Exit mobile version