Site icon Suddi Belthangady

ಪಟ್ರಮೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಿತೇಶ್ ಎನ್. ಪುತ್ರನ್ ವರ್ಗಾವಣೆ-ಬೀಳ್ಕೊಡುಗೆ

ಪಟ್ರಮೆ ಗ್ರಾ.ಪಂ. ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರಿತೇಶ್ ಎನ್. ಪುತ್ರನ್ ರವರು ಹೆಬ್ರಿ ತಾಲೂಕಿನ ಮಡಮಕ್ಕಿ ಗ್ರಾಮ ಪಂಚಾಯತ್ ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ವರ್ಗಾವಣೆಗೊಂಡ ಇವರು ತನ್ನ ಅಧಿಕಾರಾವಧಿಯಲ್ಲಿ ಉತ್ತಮ ರೀತಿಯಲ್ಲಿ ಜನಗಳಿಗೆ ಸ್ಪಂದಿಸಿ ಒಳ್ಳೆಯ ಅಭಿವೃದ್ಧಿ ಕಾರ್ಯ ನಡೆಸಿದ್ದರು.

ಇವರಿಗೆ ಪಟ್ರಮೆ ಪಂಚಾಯತ್ ವತಿಯಿಂದ ಹಾಗೂ ಸಂಜೀವಿನಿ ಒಕ್ಕೂಟದಿಂದ ಬಿಳ್ಕೊಡುಗೆ ಕಾರ್ಯಕ್ರಮವು ನ.9 ರಂದು ಪಂಚಾಯತ್ ಸಭಾಭವನದಲ್ಲಿ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಮನೋಜ್ ಕುಮಾರ್, ಉಪಾಧ್ಯಕ್ಷೆ ಮೋಹಿನಿ, ನಿಕಟ ಪೂರ್ವ ಉಪಾಧ್ಯಕ್ಷರಾದ ಯತೀಶ್, ಸದಸ್ಯರಾದ ರಾಜೇಶ್ ರೈ, ಗಿರಿಜಾ, ವೀಣಾ, ಕಾರ್ಯದರ್ಶಿ ಅಮ್ಮಿ ಪೂಜಾರಿ, ಸಂಜೀವಿನಿ ತಂಡದ ವಿನಂತಿನಿ, ನಳಿನಿ, ವನಿತಾ, ಸಿಬ್ಬಂದಿವರ್ಗ ಲೋಕೇಶ್, ಪ್ರಸನ್ನಾ, ವಿದ್ಯಾ ಕುಶಾಲಪ್ಪ ಮೊದಲಾದವರು ಉಪಸ್ಥಿತರಿದ್ದರು.

Exit mobile version