Site icon Suddi Belthangady

ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎಲ್.ಸಿ.ಆರ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕಕ್ಯಪದವು: ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎಲ್.ಸಿ.ಆರ್ ವಿದ್ಯಾಸಂಸ್ಥೆಯ 4 ವಿದ್ಯಾರ್ಥಿಗಳು ಪ್ರಶಸ್ತಿ ಗಳಿಸಿರುತ್ತಾರೆ.

ದ.ಕ.ಜಿ.ಪಂ.ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆ ಸಿದ್ದಕಟ್ಟೆ, ಬಂಟ್ವಾಳ ತಾಲೂಕು ಇದರ ಸಹಭಾಗಿತ್ವದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯು ನ.07ರಂದು ನಡೆಯಿತು.

ಚಿತ್ರಕಲೆ ಸ್ಪರ್ಧೆಯಲ್ಲಿ ಅಭಿನವ್.ಎಂ.ಪುಭು (4ನೇ ತರಗತಿ) ದ್ವಿತೀಯ ಸ್ಥಾನವನ್ನು ಆಶುಭಾಷಣ ಸ್ಪರ್ಧೆಯಲ್ಲಿ ಸಮರ್ಥ್ ಕೆ ( 4ನೇ ತರಗತಿ) ದ್ವಿತೀಯ ಸ್ಥಾನವನ್ನು, ಅಭಿನಯ ಗೀತೆ ಸ್ಪರ್ಧೆಯಲ್ಲಿ ಜೀವಲ್, ಟಿ. ಪಿ. (5ನೇ ತರಗತಿ) ತೃತೀಯ ಸ್ನಾನವನ್ನು ಮತ್ತು ಸಾತ್ವಿಕ ಕೆ (7ನೇ ತರಗತಿ ) ಛದ್ಮವೇಷ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.

Exit mobile version