Site icon Suddi Belthangady

ಇಂಟರ್ ನ್ಯಾಷನಲ್ ಅಬಕಾಸ್ ಒಲಿಂಪಿಯಾಡ್-2023: ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ವರ್ಲ್ಡ್ ಚಾಂಪಿಯನ್ಸ್

ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಇಲ್ಲಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ಐದು ವರ್ಷದಿಂದ ಹದಿನೈದು ವರ್ಷದವರೆಗಿನ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು, ಗಣಿತ ಜ್ಞಾನವನ್ನು ,ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಅಬಕಾಸ್ /ವೇದಗಣಿತ/ ಮಾನಸಿಕ ಸಾಮರ್ಥ್ಯ ತರಗತಿಗಳನ್ನು ಪ್ರಾರಂಭಿಸಲಾಗಿದ್ದು , ಕಳೆದ ವರುಷ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದರು.

ಈ ವರ್ಷ ತರಬೇತಿಗೊಂಡ ವಿದ್ಯಾರ್ಥಿಗಳನ್ನು ಅಂತರ್ರಾಷ್ಟ್ರೀಯ ಅಬಕಾಸ್ ಒಲಂಪಿಯಾಡ್ ೨೦೨೩ ಸ್ಪರ್ಧೆಯಲ್ಲಿ ವಿದ್ಯಾಮಾತಾ ಅಕಾಡೆಮಿಯು ಪಾಲ್ಗೊಳ್ಳುವಂತೆ ಮಾಡಿದ್ದು , ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೂಡ ಚಾಂಪಿಯನ್ ಆಗಿ ವಿದ್ಯಾರ್ಥಿಗಳು ಹೊರ ಹೊಮ್ಮಿದ್ದಾರೆ. ಒಟ್ಟು ೧೬ ವಿದ್ಯಾರ್ಥಿಗಳು ಇಂಟರ್ ನ್ಯಾಷನಲ್ ಅಬಕಾಸ್ ಒಲಂಪಿಯಾಡ್ ನಲ್ಲಿ ಭಾಗವಹಿಸಿ ಉತ್ತಮ ಸಾಧನೆಗೈದಿದ್ದಾರೆ.

ಚಲನಚಿತ್ರ ಕಿರುತರೆ ಕಲಾವಿದ ದಂಪತಿ ಸುರೇಶ್ ರೈ ಭವ್ಯಶ್ರೀ ರೈ ಪುತ್ರ ಪ್ರಸ್ತುತ ಡಫೋಡಿಲ್ಸ್ ಫೌಂಡೇಶನ್ ಫಾರ್ ಲರ್ನಿಂಗ್ ಸಂಜಯ್ ನಗರ ಬೆಂಗಳೂರು ಇಲ್ಲಿ ೬ ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸುಪ್ರಭಂ ರೈ ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡನೇ ರ‍್ಯಾಂಕನ್ನು ಪಡೆದಿದ್ದಾರೆ. ಪ್ರಥಮ ರ‍್ಯಾಂಕ್ ಕೆನಡದ ನಿವಿಯಾ ಒಂಟಾರಿಯೋ ಎಂಬ ವಿದ್ಯಾರ್ಥಿನಿ ಪಡೆದುಕೊಂಡಿರುತ್ತಾರೆ .
ಸುಪ್ರಭಂ ರೈ ಕೇವಲ ಎರಡು ಸೆಕೆಂಡುಗಳ ಅಂತರದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

ಅತ್ಯುತ್ತಮ ಸಾಧಕರ ಪಟ್ಟಿಯಲ್ಲಿ ಮಂಗಳೂರು ಕೊಲ್ಯದ , ಸದ್ಯ ಶಾರ್ಜಾದಲ್ಲಿ ಉದ್ಯೋಗದಲ್ಲಿರುವ ಸತೀಶ್ ಪೂಜಾರಿ ಮತ್ತು ಸಂಕೊಳಿಗೆ ಕೊಲ್ಯ ಭಗವತಿ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿರುವ ವಿನುತ ಸತೀಶ್ ದಂಪತಿ ಪುತ್ರಿ , ಸದ್ಯ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಬೀರಿ ಕೋಟೆಕಾರ್ ಇಲ್ಲಿ ೯ನೇ ತರಗತಿಯಲ್ಲಿ ಓದುತ್ತಿರುವ ಅವಿಷ್ಕಾ ಸುವರ್ಣ ಕೆ ರವರು ಪಡೆದುಕೊಂಡಿದ್ದಾರೆ. ಉಳಿದ ಏಳು ವಿದ್ಯಾರ್ಥಿಗಳು ೧೦೦% ರಲ್ಲಿ ಉತ್ತೀರ್ಣರಾಗಿದ್ದಾರೆ. ಪುತ್ತೂರಿನ ತೆಂಕಿಲದ ಹರೀಶ್ ರಮ್ಯಶ್ರೀ ದಂಪತಿ ಪುತ್ರ , ಸುದಾನ ವಸತಿಯುತ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಅನಿಶ್ ಎಂ ಎಚ್, ಕೈಕಾರದ ಬೋಟ್ಯಾಡಿ ಗುತ್ತು ಉದಯ ರೈ ಸುಚೇತಾ ಯು ರೈ ದಂಪತಿ ಪುತ್ರಿ ಸಾಂದೀಪನಿ ಶಿಕ್ಷಣ ಸಂಸ್ಥೆ ನರಿಮೊಗರು ಇಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಧೃತಿ ಯು ರೈ, ಬೀರಿ ಮಾಡೂರಿನ ಸತೀಶ್ ಪಿ ದಿವ್ಯ ಇವರ ಪುತ್ರ, ಪ್ರಸ್ತುತ ಭಗವತಿ ಆಂಗ್ಲ ಮಾಧ್ಯಮ ಶಾಲೆ ಸಂಕೊಳಿಗೆ ಇಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಜಿಶಾನ್ ಎಸ್, ಪುತ್ತೂರಿನಲ್ಲಿ ಎಸ್.ವಿ ಫ್ಯಾಷನ್ ಮಾಲಿಕ ವೀರಪ್ಪ ಶ್ರೀಮತಿ ಶ್ವೇತಾ ಹೆಚ್ ಸಿ ಇವರ ಪುತ್ರ ಪ್ರಸ್ತುತ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿ ವೈಷ್ಣವ್, ಚಾಕೋಟೆ ಮನೆ ಕಾವು ಮಾಡ್ನೂರು ಗ್ರಾಮದ ಗಿರಿಧರ ಗೌಡ ಶ್ರೀಮತಿ ನಳಿನಾಕ್ಷಿ ದಂಪತಿ ಪುತ್ರಪ್ರಸ್ತುತ ಸಾಂದೀಪನಿ ವಿದ್ಯಾಲಯ ನರಿಮೊಗರು ಇಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾಂತ್ ಸಿ .ಜಿ, ಮಂಗಳೂರಿನ ಬೋಂದೆಲ್ ಪ್ರಕಾಶ್ ಬಿ ಶ್ರೀಮತಿ ಅಶ್ವಿನಿ ದಂಪತಿ ಪುತ್ರ, ಪ್ರಸ್ತುತ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮಂಗಳೂರು ಇಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಶಸ್ತ್ ಪ್ರಕಾಶ, ಕುಂಜೂರು ಪಂಜದ ಶ್ರೀನಿವಾಸಮಯ್ಯ ಶ್ರೀಮತಿ ಜಯಲಕ್ಷ್ಮಿ ಮಯ್ಯ ದಂಪತಿ ಪುತ್ರಿ ಪ್ರಸ್ತುತ ಅಂಬಿಕಾ ವಿದ್ಯಾಲಯ ಪುತ್ತೂರು ಇಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇಂಚರ ಮಯ್ಯ ಈ ವಿದ್ಯಾರ್ಥಿಗಳು ೧೦೦ % ನಲ್ಲಿ ಪಾಸಾದ ವಿದ್ಯಾರ್ಥಿಗಳು.

ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಕಾಸರಗೋಡಿನ ಬೇಲದ ಪ್ರದೀಪ್ ಶೆಟ್ಟಿ ಅಶ್ವಿನಿ ಪ್ರದೀಪ್ ಶೆಟ್ಟಿ ದಂಪತಿ ಪುತ್ರಿ ಪ್ರಸ್ತುತ ಅನುದಾನಿತ ಜೂನಿಯರ್ ಶಾಲೆ ಪುತ್ತಿಗೆ ಇಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಪ್ತಿ ಶೆಟ್ಟಿ, ತಮಿಳುನಾಡಿನ ಚೆನ್ನೈ ಕಾಂಚಿಪುರಂ ದೀಪಕ್ ಶೆಟ್ಟಿ ದೀಪ್ತಿ ಶೆಟ್ಟಿ ದಂಪತಿ ಪುತ್ರಿ ಪ್ರಸ್ತುತ ಚೈತನ್ಯ ಟೆಕ್ನೋ ಚೆನ್ನೈನಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನ್ವಿತಾ ದೀಪಕ್ ಶೆಟ್ಟಿ , ಮಂಗಳೂರಿನ ತೊಕ್ಕಟ್ ನಿವಾಸಿ ಉಮೇಶ್ ಅಮಿತಾ ದಂಪತಿ ಪುತ್ರ ಪ್ರಸುತ್ತ ಆಸ್ಸಿಸಿ ಸೆಂಟ್ರಲ್ ಸ್ಕೂಲ್ ದೇರಳಕಟ್ಟೆ ಮಾ೦ಗಳೂರು ಇಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸೋಹನ್ ಯು .ಕೆ , ಲಂಡನ್‌ನಲ್ಲಿ ನೆಲೆಸಿರುವ ಸಂದೀಪ್ ಶೆಟ್ಟಿ ಶ್ವೇತಾ ಸಂದೀಪ್ ಶೆಟ್ಟಿ ದಂಪತಿಗಳ ಪುತ್ರನಾದ ಮಾರ್ಶಗೇಟ್ ಪ್ರೈಮರಿ ಸ್ಕೂಲ್ ಲಂಡನ್ ಇಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಥರ್ವ್ ಶೆಟ್ಟಿ , ಬನ್ನೂರಿನ ವಸಂತ ಗೌಡ ಮೀನಾಕ್ಷಿ ದಂಪತಿ ಪುತ್ರಿ ಪ್ರಸ್ತುತ ಅಂಬಿಕಾ ವಿದ್ಯಾಲಯ ಪುತ್ತೂರು ಇಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಯಾ ವಿ.ಎಂ ಪ್ರಥಮ ಶ್ರೇಣಿಯಲ್ಲಿ , ಕೆಯ್ಯೂರು ಗ್ರಾಮದ ದೇರ್ಲ ಶಿವಶ್ರೀ ರಂಜನ್ ರೈ ಮತ್ತು ಪ್ರತಿಭಾ ರೈ ಹೆಚ್ ದಂಪತಿ ಪುತ್ರ ಪ್ರಸ್ತುತ ವಿವೇಕಾನಂದ ಆಂಗ್ಲ ಮಾಧ್ಯಮದ ಶಾಲೆ ಪುತ್ತೂರು ಇಲ್ಲಿ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನುದೀಪ್ ರೈ.ಡಿ, ಜಿಡೆಕಲ್ಲು ನೆಲ್ಸನ್ ರೋಶನ್ ಡಿಸಿಲ್ವ ಮತ್ತು ಸೋನಿಯಾ ಮೆನೆಝೆಸ್ ದಂಪತಿ ಪುತ್ರಿ ಪ್ರಸ್ತುತ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಪುತ್ತೂರು ಇಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ವೀನಲ್ ಡಿ ಸಿಲ್ವ ಅಂತರಾಷ್ಟ್ರೀಯ ಅಬಾಕಸ್ ಒಲಂಪಿಯಡ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಇಂಟರ್‌ನ್ಯಾಷನಲ್ ಅಬಕಾಸ್ ಒಲಂಪಿಯಾಡ್ ನಲ್ಲಿ ವಿವಿಧ ದೇಶಗಳ ೬೦೦ ಅಕಾಡೆಮಿಗಳ ಸುಮಾರು ೧೩ ಸಾವಿರದಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾಮಾತಾ ಅಕಾಡೆಮಿಯ ೧೬ ವಿದ್ಯಾರ್ಥಿಗಳು ಟಾಪ್ ಲಿಸ್ಟ್ ನಲ್ಲಿ ಸ್ಥಾನವನ್ನು ಪಡೆದುಕೊಂಡು ಉಳಿದೆಲ್ಲಾ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಚಾಂಪಿಯನ್ಸ್ ಆಗಿದ್ದಾರೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ. ಚಿಕ್ಕ ವಯಸ್ಸಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಗೊಳಿಸಿದಲ್ಲಿ ಮುಂದೆ ಅವರು ಉತ್ತಮ ಸಾಧನೆ ಮಾಡುವುದರಲ್ಲಿ ಸಂದೇಹವೇ ಇಲ್ಲ. ಈ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯತೆಯನ್ನು ಮೈಗೂಡಿಸಿಕೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕಾಗಿದೆ- ರಮ್ಯಾ ಭಾಗ್ಯೇಶ್ ರೈ ಸಂಚಾಲಕಿ, ವಿದ್ಯಾಮಾತಾ ಅಕಾಡೆಮಿ.

Exit mobile version