Site icon Suddi Belthangady

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ-ಕಾಲೇಜಿನಿಂದ ಗ್ರಂಥಾಲಯಕ್ಕೆ ಭೇಟಿ

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು ಇಲ್ಲಿ ಪ್ರತಿ ಶುಕ್ರವಾರ ಬೇರೆ ಬೇರೆ ಪಠ್ಯೇತರ ಚಟುವಟಿಕೆ ನಡೆಯುತ್ತಿದ್ದು, ಈ ಶುಕ್ರವಾರ ಭಾಷಾ ವಿಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಾದ ಅಕ್ಷತಾ ಮತ್ತು ಮಮತಾ ಶಾಂತಿ ಗ್ರಂಥಾಲಯಕ್ಕೆ ಭೇಟಿ ನೀಡಿ ಬೇರೆ ಬೇರೆ ಪುಸ್ತಕಗಳನ್ನು ಓದಿಸಿದರು.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕ ವಿನಯ್ ಮತ್ತು ಸ್ವಾತಿ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯಲ್ಲಿ ಗಿಡಗಳ ಪರಿಚಯವನ್ನು ಮಾಡಿದರು.ಪರಿಸರ ವಿಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಾದ ಸ್ವರ್ಣ ಲತಾ ಮತ್ತು ರೂಪಲತಾ ಶಾಲಾ ಪರಿಸರವನ್ನು ಸ್ವಚ್ಛ ಮಾಡಿದರು.ಸಾಂಸ್ಕೃತಿಕ ವಿಭಾಗದ ವಿದ್ಯಾರ್ಥಿಗಳಿಗೆ ನೃತ್ಯಗಳ ಪರಿಚಯವನ್ನು ಪಿಪಿಟಿ ಮೂಲಕ ತಿಳಿಸಿಕೊಡಲಾಯಿತು.ಗಣಿತ ವಿಭಾಗದ ವಿದ್ಯಾರ್ಥಿಗಳಿಗೆ ಕಲರ್ ಪೇಪರ್ ಉಪಯೋಗಿಸಿ ವಿವಿಧ ರೀತಿಯ ಆಕೃತಿಗಳನ್ನು ಮಾಡಿಸಿದರು.ಎನ್‌ಸಿಸಿ ಮತ್ತು ಸೇವಾದಳ ವಿದ್ಯಾರ್ಥಿ ಗಳು ತಮ್ಮದೇ ಆದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಸಾಂಸ್ಕೃತಿಕ-ಸಪ್ನಾಝ್ ಮತ್ತು ಸುಜಾತ, ಗಣಿತ – ಶ್ವೇತ ಮತ್ತು ಸಂಧ್ಯಾ, ಎನ್‌ಸಿಸಿ-ಸಂಗೀತ ಮತ್ತು ಮಧು, ಸೇವಾದಳ-ಶುಭ ಮತ್ತು ಪವಿತ್ರ ಇವರು ವಿದ್ಯಾರ್ಥಿಗಳಿಗೆ ಸಹಕರಿಸಿದರು.

Exit mobile version