ಬೆಳ್ತಂಗಡಿ: ವ್ಯಕ್ತಿತ್ವ ವಿಕಸನಕ್ಕೆ ಹೆಸರಾದ ಅಂತರಾಷ್ಟ್ರೀಯ ಸಂಸ್ಥೆ ಜೇಸಿಐ ವಲಯ 15 ರ ವಾರ್ಷೀಕ ಸಮ್ಮೇಳನ ಸಂಭ್ರಮ 2023 ಪುತ್ತೂರಿನಲ್ಲಿ ನಡೆಯಿತು.
ಈ ವರ್ಷ ಘಟಕಗಳು ಮಾಡಿದ ಕೆಲಸ ಕಾರ್ಯಗಳನ್ನು ಗುರುತಿಸುವ ಈ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಸಮಗ್ರ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದೆ.
ಕಮ್ಯೂನಿಟಿ ಡೆವಲಪ್ಮೆಂಟ್ ವಿಭಾಗದಲ್ಲಿ ಅತ್ಯುತ್ತಮ ಘಟಕ, ಅತ್ಯುತ್ತಮ ಮಹಿಳಾ ವಿಭಾಗ ಮಮಿತಾ ಸುಧೀರ್ ವಿನ್ನರ್, ಅತ್ಯುತ್ತಮ ನ್ಯೂ ಜೆಸಿ ಶೈಲೇಶ್ ವಿನ್ನರ್ ಪ್ರಶಸ್ತಿ , ನ್ಯಾಷನಲ್ ಫ್ಲಾಗ್ ಶಿಪ್ ವಿನ್ನರ್,
ಇಂಡಿವಿಜುಯಲ್ ಡೆವಲಪ್ಮೆಂಟ್ ತರಬೇತಿ ವಿಭಾಗದಲ್ಲಿ ವಿನ್ನರ್ ಪ್ರಶಸ್ತಿ, ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಮನ್ನಣೆ, ಧಾನ್ ಕಾರ್ಯಕ್ರಮಗಳ ಆಯೋಜನೆಯಲ್ಲಿ ವಿನ್ನರ್, ಘಟಕದಿಂದ ಮೂಡಿಬಂದ
5 ಜನ ತರಬೇತುದಾರರಿಗೆ ಮನ್ನಣೆ ಹಾಗೂ ಅತ್ಯುತ್ತಮ ಜೂನಿಯರ್ ಜೆಸಿ ತಂಡಕ್ಕೆ ಮನ್ನಣೆಯನ್ನು ಬೆಳ್ತಂಗಡಿಯು ಪಡೆದುಕೊಂಡಿದೆ.
ವಲಯ ಉಪಾಧ್ಯಕ್ಷರಾಗಿ ಶಂಕರ್ ರಾವ್: ಈ ವರ್ಷ ಬೆಳ್ತಂಗಡಿಯನ್ನು ಮುನ್ನಡೆಸಿದ ನಾಯಕ ಶಂಕರ್ ರಾವ್ ವಾರ್ಷೀಕ ಸಮ್ಮೇಳನದಲ್ಲಿ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅತ್ಯಧಿಕ ಮತ ಗಳಿಸಿ ವಲಯ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಸಮ್ಮೇಳನದಲ್ಲಿ ಘಟಕ ಅಧ್ಯಕ್ಷ ಶಂಕರ್ ರಾವ್, ಕಾರ್ಯದರ್ಶಿ ಸುಧೀರ್ ಕೆ.ಎನ್, ನಿಕಟ ಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ ಎಸ್ ಪೂರ್ವಧ್ಯಕ್ಷ ಚಿದಾನಂದ ಇಡ್ಯಾ, ಉಪಾಧ್ಯಕ್ಷರುಗಳಾದ ರಂಜಿತ್ ಹೆಚ್.ಡಿ, ಪ್ರೀತಮ್ ಶೆಟ್ಟಿ, ಮಹಿಳಾ ಸಂಯೋಜಕಿ ಮಮಿತಾ ಸುಧೀರ್, ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ಚಂದ್ರಹಾಸ ಬಳಂಜ,ಸದಸ್ಯರಾದ ಶೈಲೇಶ್ ಹಾಗೂ ಜ್ಯೂನಿಯರ್ ಜೆಸಿ ನಾಯಕ ರಾಮಕೃಷ್ಟ ಶರ್ಮಾ ರವರು ಭಾಗವಹಿಸಿದರು.