Site icon Suddi Belthangady

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆರು ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ

ಬೆಳ್ತಂಗಡಿ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ವಿವೇಕ ಶಾಲಾ ಯೋಜನೆಯ ಅಡಿಯಲ್ಲಿ 2022-23ರಲ್ಲಿ ಮಂಜೂರಾದ ಆರು ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನ.06ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ರವರಿಂದ ನೆರವೇರಿಸಿದರು.ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಕೇಸರಿರವರು, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮೋಹನ್ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜಾ, ಶಾಲಾ SDMC ಅಧ್ಯಕ್ಷ ನೀನಾ ಕುಮಾರ್, ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪುತ್ತೂರಾಯರು, ಕಟ್ಟಡದ ಕಂಟ್ರಾಕ್ಟರ್ ಅಬ್ದುಲ್ ರಜಾಕ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜರವರು ಬೆಳ್ತಂಗಡಿಯ ಹೃದಯ ಭಾಗದಲ್ಲಿರುವ ಈ ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಹಿಂದಿನಂತೆಯೆ ಮುಂದೆಯೂ ಸಹ ತಮ್ಮ ಸಹಕಾರ ಯಾವಾಗಲೂ ಇರುವುದಾಗಿ ಭರವಸೆಯನ್ನು ನೀಡಿದರು.ಇದೇ ವೇಳೆ ಕಟ್ಟಡ ಮಂಜೂರಾತಿಯಲ್ಲಿ ಶಾಸಕರ ನೆರವನ್ನು ನೆನೆದು ಅವರಿಗೆ ಕಿರು ಸನ್ಮಾನವನ್ನು ಮಾಡಲಾಯಿತು.

ಹಾಗೆ ಕ್ಲಪ್ತ ವೇಳೆಯಲ್ಲಿ ಕಟ್ಟಡವನ್ನು ಪೂರ್ಣಗೊಳಿಸಿದ ಕಂಟ್ರಾಕ್ಟರ್ ಅವರಿಗೂ ಕಿರು ಕಾಣಿಕೆಯನ್ನು ನೀಡಲಾಯಿತು.ಈ ಸಮಯದಲ್ಲಿ ವಿಶೇಷ ಚೇತನವುಳ್ಳ ಮಕ್ಕಳಿಗೆ ಇಲಾಖಾ ವತಿಯಿಂದ ಕೊಡ ಮಾಡಲ್ಪಡುವ ಸಾಧಾರಣ ಸಲಕರಣೆಗಳನ್ನು ಶಾಸಕರು ವಿತರಿಸಿದರು.

BIERT ಜಗದೀಶ್ ರವರು ಈ ಮಕ್ಕಳಿಗೆ ಸಿಗುವ ಸೌಲತ್ತುಗಳ ಬಗ್ಗೆ ವಿವರಿಸಿದರು.ಇಲಾಖಾ ಪರವಾಗಿ ತಾರಕೇಸರಿರವರು ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕರು ಸ್ವಾಗತಿಸಿ, ಶಿಕ್ಷಕಿ ವಿದ್ಯಾ ಶೆಣೈ ವಂದನಾರ್ಪಣೆ ಮಾಡಿ, ಶಿಕ್ಷಕಿ ಶುಭಾರವರು ನಿರೂಪಿಸಿದರು.

Exit mobile version