Site icon Suddi Belthangady

ಬಳಂಜ: ನೆಕ್ಕಿಲ ನಾಗಬನದಲ್ಲಿ ಜೀರ್ಣೋದ್ಧಾರ ಪೂರ್ವಭಾವಿ ಪೂಜಾ ಕಾರ್ಯಕ್ರಮ

ಬಳಂಜ: ಬಳಂಜ ಗ್ರಾಮದ ನೆಕ್ಕಿಲದಲ್ಲಿರುವ ಪ್ರಾಚೀನ ನಾಗಬನವು ಆಜೀರ್ಣಾವಸ್ಥೆಯಲ್ಲಿದ್ದು ಇದನ್ನು ಜೀರ್ಣೋದ್ಧಾರ ಮಾಡುವ ಕುರಿತು ಇದಕ್ಕೆ ಸಂಬಂಧಪಟ್ಟ ಹೆಗ್ಡೆ ಕುಟುಂಬದ ಜಯರಾಮ ಹೆಗ್ಡೆ, ವಿಜಯ ಹೆಗ್ಡೆ ಹಾಗೂ ಸಹೋದರ, ಸಹೋದರಿಯರು, ನೆಕ್ಕಿಲ ಪುರಂದರ ಶೆಟ್ಟಿ ಮತ್ತು ಸಹೋದರರು, ಬಾಬು ಮೇರ ಮತ್ತು ಅವರ ಕುಟುಂಬಸ್ಥರು ಒಟ್ಟು ಸೇರಿ ಸಂಕಲ್ಪವನ್ನು ಮಾಡಿದ್ದು ಇದರ ಪೂರ್ವಭಾವಿಯಾಗಿ ಪ್ರಾಯಶ್ಚಿತ್ತ ಹೋಮ, ಅಘೋರ ಹೋಮ, ಸರ್ಪ ಸಂಸ್ಕಾರ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ, ಸುದರ್ಶನ ಹೋಮ ಮುಂತಾದ ವೈದಿಕ ಪೂಜಾ ವಿಧಿ ವಿಧಾನಗಳು ಹಾಗೂ ಅನ್ನ ಸಂತರ್ಪಣೆ ಎರಡು ದಿನಗಳ ಪರ್ಯಂತ ನಡೆಯಿತು.

ಮುಂದಿನ ದಿನಗಳಲ್ಲಿ ಇಲ್ಲಿನ ನಾಗ ಬನದಲ್ಲಿ ಸುಂದರವಾದ ನಾಗ ದೇವರ ಕಟ್ಟೆ ನಿರ್ಮಾಣಗೊಂಡು ನಾಗ ಪ್ರತಿಷ್ಠೆ ನಡೆಯಲಿದೆ ಎಂದು ಇದರ ನೇತೃತ್ವವನ್ನು ವಹಿಸಿರುವ ವಿಜಯ ಹೆಗ್ಡೆ ಚಿತ್ರಾ ದಂಪತಿಗಳು ತಿಳಿಸಿದ್ದು, ಈ ನಾಗಬನಕ್ಕೆ ಸಂಬಂಧ ಪಟ್ಟ ಕುಟುಂಬಸ್ಥರು ಸಂಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದ್ದಾರೆ.

Exit mobile version