Site icon Suddi Belthangady

ಉಜಿರೆ ಸಂತ ಅಂತೋನಿ ಚರ್ಚ್ ನ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾಕೂಟ

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನ ನ. 26ರಂದು ನಡೆಯಲಿದ್ದು ಇದರ ಅಂಗವಾಗಿ ನ.5ರಂದು ಚರ್ಚ್ ಮೈದಾನದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.ಚರ್ಚ್ ಧರ್ಮ ಗುರು ವ.ಫಾ.ಜೇಮ್ಸ್ ಡಿಸೋಜಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.ನಂತರ ಧ್ವಜ ನೀಡುವುದರ ಮೂಲಕ ಚಾಲನೆ ನೀಡಿದರು.

ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್ ಹಾಗೂ ಪಾಲನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ಎಲ್ಲಾ ಪ್ರಾಯದವರಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಯಿತು.ಸಮಸ್ತ ಕ್ರೈಸ್ತ ಭಾಂದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಲವೀನಾ ಫೆರ್ನಾಂಡಿಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ರೋಷನ್ ಡಿಸೋಜಾ, ವಲೇರಿಯನ್ ಡಿಸೋಜಾ ಗ್ರೆಗ್ ಮೆಲ್ಸ್ಟಾರ್ ಸಹಕರಿಸಿದರು.

Exit mobile version