ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಆಂತರಿಕ ಗುಣಮಟ್ಟ ಭರವಸ ಕೋಶ, ವಿದ್ಯಾರ್ಥಿ ಪ್ರತಿಭಾ ವೇದಿಕೆ, ಸಾಂಸ್ಕೃತಿಕ ಸಂಘ, ಕ್ರೀಡಾ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1ಮತ್ತು2, ಭಾರತೀಯ ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ದಿನಾಂಕ ನ.1ರಂದು 50ನೇ ‘ಕನ್ನಡ ರಾಜ್ಯೋತ್ಸವ’ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಕನ್ನಡಾಂಬೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕರ್ನಾಟಕದ ಇತಿಹಾಸ, ಕರ್ನಾಟಕದ ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಪ್ರಸ್ತುತ ಸ್ಥಿತಿ ಗತಿಯ ಕುರಿತಾಗಿ ವಿದ್ಯಾರ್ಥಿ ಪ್ರತಿಭಾ ವೇದಿಕೆಯ ವಿದ್ಯಾರ್ಥಿನಿಯರು ಭಾಷಣ ಮಾಡಿದರು.ಕನ್ನಡದ ಮಹತ್ವ ಹಾಗು ಅಭಿಮಾನವನ್ನು ಸಾರುವ ಗೀತೆಗಳನ್ನು ಹಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಟಿ.ಕೆ.ಶರತ್ ಕುಮಾರ್ ಇವರು ದಿನದ ಮಹತ್ವವನ್ನು ಹಾಗೂ ಕೇವಲ ಕನ್ನಡದ ಕುರಿತಾಗಿ ಕನ್ನಡ ರಾಜ್ಯೋತ್ಸವದಂದು ಮಾತ್ರ ಅಭಿಮಾನವನ್ನು ತೋರದೆ ಪ್ರತಿದಿನವೂ ಕನ್ನಡಿಗನೆಂದು ಗರ್ವದಿಂದ ಬಾಳಬೇಕು ಎಂದು ಅರಿವು ಮೂಡಿಸುವ ಮೂಲಕ ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಶೈಕ್ಷಣಿಕ ಸಾಲಿನ ದೈನಂದಿನ ಚಟುವಟಿಕೆಗಳ ಅಂಗವಾಗಿ “ಸೇವಾ ಸಿಂಧು” ಎಂಬ ಪಾಕ್ಷಿಕ ಭಿತ್ತಿಪತ್ರವನ್ನು ಮಾನ್ಯ ಪ್ರಾಂಶುಪಾಲರು ಅನಾವರಣಗೊಳಿಸಿದರು.ಕಾರ್ಯಕ್ರಮವನ್ನು ರೋವರ್ಸ್ ರೇಂಜರ್ಸ್ ನ ರೇಂಜರ್ ಆದ ಕು.ಪವಿತ್ರ ಇವರು ಎಲ್ಲರನ್ನೂ ಸ್ವಾಗತಿಸಿ, ಭಾರತೀಯ ಯುವ ರೆಡ್ ಕ್ರಾಸ್ ನ ಪದಾಧಿಕಾರಿಯಾದ ಕು.ನೇತ್ರಾ ಇವರು ಧನ್ಯವಾದವಿತ್ತರು.ಕಾರ್ಯಕ್ರಮವನ್ನು ಕು.ದೀನಕೃಪಾ ಇವರು ನಿರೂಪಿಸಿದರು.