Site icon Suddi Belthangady

ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತು ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಸಾಮಾನ್ಯ ಸಭೆ

ಬೆಳ್ತಂಗಡಿ: ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ಆಶ್ರಯದಲ್ಲಿ ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ, ಹಾಗೂ ಮಲೆಕುಡಿಯ ಸಂಘ ದ.ಕ. ಜಿಲ್ಲೆ ಇದರ ಸಹಯೋಗದೊಂದಿಗೆ ಜೇನು ಕುರುಬ, ಬೆಟ್ಟ ಕುರುಬ, ಯರವ, ಸೋಲಿಗ, ಕೊರಗ, ಹಸಲರು, ಗೊಂಡ, ಮಲೆಕುಡಿಯ, ಗೌಡ್ಲು, ಸಿದ್ದಿ, ಹಕ್ಕಿಪಿಕ್ಕಿ ಡೋಂಗ್ರೀ-ಗರಾಸಿಯಾ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಸಾಮಾನ್ಯ ಸಭೆ 2023 ನವೆಂಬರ್ 4 ಮತ್ತು 5ರಂದು ನಡೆಯಲಿದೆ.

ಬೆಳ್ತಂಗಡಿ ಕೊಯ್ಯೂರು ಗ್ರಾಮದ ಶಿವಗಿರಿಯಲ್ಲಿರುವ ಮಲೆಕುಡಿಯರ ಸಮುದಾಯ ಭವನದಲ್ಲಿ ಈ ಕಾರ್ಯಾಗಾರ ನಡೆಯಲಿದ್ದು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ದ.ಕ. ಜಿಲ್ಲೆಯ ಯೋಜನಾ ಸಮನ್ವಯಾಧಿಕಾರಿ, ಶಿವಕುಮಾರ್‌ರವರು ಕಾರ್ಯಕ್ರವನ್ನು ಉದ್ಘಾಟಿಸಲಿದ್ದಾರೆ.ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ಅಧ್ಯಕ್ಷರು ಪುಟ್ಟ ಬಸವಯ್ಯ, ಎಚ್.ಡಿ. ಕೋಟೆ ಮೈಸೂರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಚಾಮರಾಜನಗರ ಜಿಲ್ಲೆಯ ಸೋಲಿಗ ಅಭಿವೃದ್ಧಿ ಸಂಘಟನೆಯ ಡಾ. ಸಿ. ಮಾದೇಗೌಡ ವಿಷಯ ಮಂಡನೆ ಮಾಡಲಿದ್ದಾರೆ.

ಮಂಗಳೂರು ವಿ.ವಿ., ಮಂಗಳ ಗಂಗೋತ್ರಿ ಸಮಾಜಶಾಸ್ತ್ರ ವಿಭಾಗ, ಅಸೋಸಿಯೇಟ್ ಪ್ರೊಫೆಸರ್ ಡಾ. ಸಬಿತಾ ಕೊರಗ, ಪದವಿ ಮತ್ತು ಪದವಿ ಪೂರ್ವ ಕಾಲೇಜು ಆಳ್ವಾಸ್ ಮೂಡಬಿದ್ರೆಯ ಪ್ರಾಂಶುಪಾಲರು, ಡಾ. ಕುರಿಯನ್, ಬೆಳ್ತಂಗಡಿ ತಾಲೂಕು ಸಮಾಜ ಕಲ್ಯಾಣ ಇಲಾಖಾಧಿಕಾರಿ, ಹೇಮಚಂದ್ರ, ಉಳ್ಳಾಲ ತಾಲೂಕು ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಶ್ರೀ ಮತ್ತಾಡಿ ಕಾಯರ್ ಪಲ್ಕೆ, ಬೆಂಗಳೂರು, ಉಚ್ಚ ನ್ಯಾಯಾಲಯ ವಕೀಲ ಜಯರಾಮ್ ಸಿದ್ದಿ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು, ಸಮುದಾಯಗಳ ರಾಜ್ಯ ಒಕ್ಕೂಟದ ಸಂಯೋಜಕ ಶೈಲೇಂದ್ರ ಕುಮಾರ್, ಮೈಸೂರು, ಉಡುಪಿ ಜಿಲ್ಲೆ ಪೆರ್ನಾಲು-ಕಾಪು, ಸಮಗ್ರ ಗ್ರಾಮೀಣ ಆಶ್ರಮ, ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟ ರಾಜ್ಯ ಸಂಚಾಲಕರು, ಪುಷ್ಪ ಬೆಟ್ಟ ಕುರುಬ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಅಧ್ಯಕ್ಷರಾದ ಸುಶೀಲಾ ನಾಡ, ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ ಇದರ ಅಧ್ಯಕ್ಷ ಶ್ರೀಧರ ಗೌಡ ಈದು, ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ದ. ಕ. ಜಿಲ್ಲಾ ಸಂಚಾಲಕರು, ಬಾಲಕೃಷ್ಣ ಕೆ. ಪೊಳಲಿ, ಅರಣ್ಯ, ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ದ. ಕ. ಜಿಲ್ಲಾ ಸಂಚಾಲಕರು, ಸಂಜೀವ ಮೂಡಬಿದ್ರೆ, ಮಲೆಕುಡಿಯರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಎಳನೀರು, ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ, ಉಡುಪಿ ಜಿಲ್ಲಾ ಸಂಚಾಲಕರು, ಕೆ.ಪುತ್ರನ್ ಹೆಬ್ರಿ, ಶಿವಮೊಗ್ಗ ಜಿಲ್ಲೆ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಕಾರ್ಯದರ್ಶಿ, ರಾಮಣ್ಣ ಹಸಲರು, ಕೊಡಗು ಜಿಲ್ಲೆ, ಬುಡಕಟ್ಟು ಕಾರ್ಮಿಕರ ಸಂಘ ಅಧ್ಯಕ್ಷರು, ವೈ. ಬಿ. ಗಪ್ಪು, ಚಿಕ್ಕಮಗಳೂರು ಜಿಲ್ಲೆ ಕಾರ್ಮಿಕರ ನಿವೇಶನ ರಹಿತರ ಸಂಘದ ಕಾರ್ಯದರ್ಶಿ, ರಾಜೇಶ್ ಕೊಡಗು ಜಿಲ್ಲೆ ಬುಡಕಟ್ಟು ಕಾರ್ಮಿಕರ ಸಂಘ ಖಜಾಂಜಿ, ಜ್ಯೋತಿ ಮಾಯಾಮುಡಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟ ಪಿರಿಯಪಟ್ನ ತಾಲೂಕು ಅಧ್ಯಕ್ಷರು, ರೇಣುಕಾ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕರು, ಕರಿಯ ಕುಡಿಯ ಇವರುಗಳು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಅಖಿಲ ಕೇರಳ ಮೆಲಕುಡಿ-ಕುಡಿಯ ಸೇವಾ ಸಂಘ ಅಧ್ಯಕ್ಷರು, ಮಾಧವ ಕೊಜಪ್ಪೆ ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ಅಧ್ಯಕ್ಷರು ಶ್ರೀ ಗಂಗಾಧರ ಗೌಡ, ಚಿಕ್ಕಮಗಳೂರು ಜಿಲ್ಲಾ ಮಲೆಕುಡಿಯ ಸಂಘ ಅಧ್ಯಕ್ಷರು ಗೋಪಾಲ ಕೊಡಗು ಜಿಲ್ಲಾ ಮಲೆಕುಡಿಯ ಸಂಘ ಅಧ್ಯಕ್ಷರು ಹರೀಶ ಕೊಯನಾಡು ಇವರುಗಳು ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹೆಗ್ಗಡೆದೇವನ ಕೋಟೆಯ ಜೇನುಕುರುಬ ಸಮುದಾಯದ ಶೀ ಸೋಮಣ್ಣ ಅವರನ್ನು ಅಭಿನಂದಿಸಿ ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ.

Exit mobile version