ಕಲ್ಲೇರಿ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, 10 ದಿನಗಳ ಬಟ್ಟೆ ಕಸೂತಿ ತಯಾರಿಕೆಯ(ಆರಿ ವರ್ಕ್) ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಕಲ್ಲೇರಿ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ಸಚಿನ್ ಹೆಗ್ಡೆ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.”ಗ್ರಾಮೀಣ ಪ್ರದೇಶದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕಾರ್ಯಕ್ರಮ ಆಯೋಜಿಸಿದ್ದು ಗ್ರಾಮೀಣ ಮಹಿಳೆಯರು ಸ್ವ ಉದ್ಯೋಗ ಮಾಡಲು ಸಹಕಾರಿ, ಮಹಿಳೆಯರು ತರಬೇತಿ ಪಡೆದು ಬ್ಯಾಂಕ್ ಸಾಲ ಸೌಲಭ್ಯ ಪಡೆದು ಯಶಸ್ವೀಯಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕಾರದ ಜೀವನ್ ಕೊಲ್ಯ, ತರಬೇತುದಾರರಾದ ಸುಮನ ಉಪಸ್ಥಿತರಿದ್ದರು.ಕಲ್ಲೇರಿ ಗ್ರಾಮ ವ್ಯಾಪ್ತಿಯ ಸುತ್ತ ಮುತ್ತ ಊರಿನ ಸುಮಾರು 25 ಮಹಿಳೆಯರು ಈ 10 ದಿವಸದ ತರಬೇತಿ ಪಡೆಯಲಿದ್ದಾರೆ.