ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೆ|ಫಾ|ಸ್ಟ್ಯಾನಿ ಗೋವಿಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.”ನಾವು ಕನ್ನಡ ನೆಲ, ಜಲ ,ಫಲವನ್ನು ಉಣ್ಣುತ್ತಿದ್ದೇವೆ. ಕನ್ನಡ ವ್ಯವಸ್ಥಿತ ಭಾಷೆ.ಕನ್ನಡ ಭಾಷೆ ಮಾತ್ರವಲ್ಲ ಅದು ನಮ್ಮ ಸಂಸ್ಕೃತಿ.
ಕನ್ನಡ ನಾಡು ರೂಪುಗೊಳ್ಳಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರ ನಿಸ್ವಾರ್ಥ ಸೇವೆ,ತ್ಯಾಗ ಬಲಿದಾನವನ್ನು ನೆನಪಿಸಿಕೊಳ್ಳುವ ಸುದಿನವಿಂದು. ನಾಡು – ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ, ಕನ್ನಡ ನಾಡು -ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗ್ಗೆ ನಾವು ಗಮನಹರಿಸ ಬೇಕು ಎಂದು ಅವರು ಸಂದೇಶ ನೀಡಿದರು.ಕನ್ನಡ ನಾಡು- ನುಡಿಯ ಸಂವರ್ಧನೆಗಾಗಿ ನಾವು ಸದಾ ಸಿದ್ಧರಿರ ಬೇಕು.
ಭಾಷೆಯನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಅವರು ಹೇಳಿದರು.ಪುಂಜಾಲಕಟ್ಟೆ ಕ್ಲಸ್ಟರ್ ಸಿಆರ್ ಪಿ ಚೇತನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ| ಜೆರೊಮ್ ಡಿಸೋಜ ಸ್ವಾಗತಿಸಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮೋಹನ್ ನಾಯಕ್ ವಂದಿಸಿ, ಶಿಕ್ಷಕಿಯರಾದ ಸುಚಿತ್ರಕಲಾ ರಾಜ್ಯೋತ್ಸವದ ಕುರಿತು ಮಾತನಾಡಿದರು, ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು.