ಬೆಳ್ತಂಗಡಿ: ನಾಲ್ಕು ಸಾವಿರ ಛಾಯಾಗ್ರಹಕರು ಅವಿಭಜಿತ ಜಿಲ್ಲೆಯಲ್ಲಿ ಇರುವುದು ದೊಡ್ಡ ಶಕ್ತಿ ಎಂದು ಅ.31 ರಂದು ಬೆಳ್ತಂಗಡಿ ಹೋಲಿ ರೆಡೀಮೆರ್ ಚರ್ಚ್ ಅಡಿಟೋರಿಯಂ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಲ್ಲಿ ರಕ್ಷಿತ್ ಶಿವರಾಮ್ ತಿಳಿಸಿದರು.
ಬೆಳ್ತಂಗಡಿ ಭಾಗದಲ್ಲಿ ಛಾಯಾಗ್ರಾಹಕರ ಸಂಘದ ಕಟ್ಟಡ ಇರುವುದು ಹೆಮ್ಮೆಯ ವಿಷಯ. ಜಾತಿ ಧರ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮುಖ್ಯ ಪಾತ್ರವನ್ನು ಛಾಯಾಗ್ರಾಹಕರು ವಹಿಸುತ್ತಾರೆ, ಸರ್ಕಾರದಿಂದ ಯಾವುದೇ ಅನುದಾನವನ್ನು ಒದಗಿಸಲು ಸದಾ ಸಿದ್ಧನಿದ್ದೇನೆ, ಪ್ರಪ್ರಥಮ ಬಾರಿಗೆ ಛಾಯಾಗ್ರಹಕರ ಸಂಘದ ಮಹಿಳಾ ಅಧ್ಯಕ್ಷರಿಗೆ ಶುಭ ಹಾರೈಸಿದರು
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಕೆ ಪಿ ಎ ದಕ್ಷಿಣ ಕನ್ನಡ ಉಡುಪಿ ಸಂಚಾಲಕರಾದ ಕರುಣಾಕರ ಕಾನಂಗಿ ನೆರವೇರಿಸಿದರು.
ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಟ್ಟಡ ಸಮಿತಿಯ ಅಧ್ಯಕ್ಷ ಆನಂದ್ ಎನ್ ಬಂಟ್ವಾಳ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ, ಎಸ್ ಕೆ ಪಿ ವಿವಿಧೋಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಬೆಳ್ತಂಗಡಿ ವಲಯದ ಸ್ಥಾಪಕ ಅಧ್ಯಕ್ಷ ಪಾಲಾಕ್ಷ ಸುವರ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗುರುವಾಯನಕೆರೆ ವೈಭವ್ ಇದರ ಮಾಲಕರು ಸೀತಾರಾಮ್ ಬಿ ಶೆಟ್ಟಿ ಹಾಗೂ ಜಿಲ್ಲಾ ಸಮಿತಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ ಆನಂದ್ ಎನ್ ಬಂಟ್ವಾಳ ಕಾರ್ಯದರ್ಶಿ ನಿತೀನ್ ಬಿಳುವಾಯಿ ಕೋಶಾದಿಕಾರಿ ನವೀನ್ ರೈ ಪಂಜಳ, ಜಿಲ್ಲಾ ಪತ್ರಿಕಾ ಪ್ರತಿನಿಧಿ ಉಮೇಶ್ ಮದ್ದಡ್ಕ, ಬೆಳ್ತಂಗಡಿ ವಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಶೋಕ್ ಆಚಾರ್ಯ, ಕಾರ್ಯದರ್ಶಿ ಹರ್ಷ ಬಳ್ಳ ಮಂಜ ಕೋಶಾಧಿಕಾರಿ ಹರೀಶ್ ಕೊಳ್ತಿಗೆ ಇವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಕೆ.ಜಿ ಅಧ್ಯಕ್ಷರಾದ ಅಶೋಕ್ ಆರ್ಚಾಯ ಪ್ರಧಾನ ಕಾರ್ಯದರ್ಶಿಯಾದ ಹರ್ಷ ಬಳ್ಳ ಮಂಜ ಕೋಶಾಧಿಕಾರಿಯದ ಹರೀಶ್ ಕೊಳ್ತಿಗೆ, ನಿಯೋಜಿತ ಗೌರವಾಧ್ಯಕ್ಷರಾದ ಜಗದೀಶ್ ಜೈನ್ ನಿಯೋಜಿತ ಅಧ್ಯಕ್ಷರಾದ ಸಿಲ್ವಿಯ ಉಪಸ್ಥಿತರಿದ್ದರು.
ಸಂಘದ ಸ್ಥಾಪಕ ಅಧ್ಯಕ್ಷರಾದ ಪಾಲಾಕ್ಷ ಪಿ ಸುವರ್ಣ ಸ್ವಾಗತಿಸಿ ಚಂದ್ರಹಾಸ ನಿರೂಪಿಸಿ ನಿಯೋಜಿತ ಪ್ರಧಾನ ಕಾರ್ಯದರ್ಶಿ ವಿಜಯ ಎಚ್ ಪ್ರಸಾದ್ ಧನ್ಯವಾದವಿತರು