Site icon Suddi Belthangady

ಧರ್ಮಸ್ಥಳ: ಶ್ರೀ.ಧ.ಮಂ.ಆಂ.ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಬರಹಗಾರರಾದ ರೇಣುಕಾ ಸುಧೀರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ತದನಂತರ ಮಾತನಾಡಿದ ಅವರು ಕನ್ನಡದ ಹಿರಿಮೆ, ಭಾಷೆಯ ಅಗತ್ಯ, ಸಾಹಿತ್ಯ ಪ್ರೀತಿ, ಭಾಷೆಯ ಶುದ್ಧತೆ, ತಾಯ್ನಾಡಿನ ಗೌರವ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ವಿವರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಪ್ರಾಸ್ತಾವಿಕವಾಗಿ ಮಾತನಾಡಿ ಭಾಷೆಯ ಮಹತ್ವ, ಕನ್ನಡ ಹೃದಯದ ಭಾಷೆ, ಭಾವನೆಯನ್ನು ಸ್ಪಂದಿಸುವ ಭಾಷೆ ನಾವು ಆಂಗ್ಲ ಮಾಧ್ಯಮದವರು ಆದರೂ ಕನ್ನಡ ಹಾಗೂ ಕರ್ನಾಟಕದ ಸಂಸ್ಕೃತಿಯನ್ನು ಮರೆಯಲಾರೆವು ಎಂದು ನುಡಿದು ಎಲ್ಲರನ್ನೂ ಸ್ವಾಗತಿಸಿದರು.

ರಾಜ್ಯೋತ್ಸವದ ಕುರಿತಾಗಿ ಇಣುಕು ನೋಟ ಪಂಪನಿಂದ ಆಧುನಿಕತೆಯವರೆಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಭಿತ್ತಿ ಪತ್ರಿಕೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ಕುಮಾರಿ ಆಶಿತಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಕುಮಾರಿ ಅಪೇಕ್ಷ ಅತಿಥಿಗಳ ಕಿರು ಪರಿಚಯವನ್ನು ನೀಡಿ, ಕುಮಾರಿ ಅನಾಘ ವಂದಿಸಿದರು.ವಿದ್ಯಾರ್ಥಿಗಳು ಹಳದಿ ಹಾಗೂ ಕೆಂಪು ಬಣ್ಣದ ದಿರಿಸಿನಿಂದ ಕಂಗೊಳಿಸುತ್ತಿದ್ದರು.ಶಾಲಾ ಶಿಕ್ಷಕ ವೃಂದ ,ಶಿಕ್ಷಣ ಸ್ನಾತಕೋತ್ತರದ ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Exit mobile version