ಕುತ್ಲೂರು: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರಿಂದ ಪ್ರವರ್ತಿತ ಸದ್ಗುರು ನವೋದಯ ಸ್ವಸಹಾಯ ಸಂಘ ಕುತ್ಲೂರು ಇದರ ಆಂತರಿಕ ಲೆಕ್ಕ ಪರಿಶೋಧನೆ ಹಾಗೂ ಲಾಭಾಂಶ ನಿಧಿ ಆಡಿಟ್ ಮುಂಗಡ ಸಭೆ ಇತ್ತೀಚೆಗೆ ಕುತ್ಲೂರು ಸದ್ಗುರು ಕಾಂಪ್ಲೆಕ್ಸ್ ನಲ್ಲಿ ಸಂಘದ ಅಧ್ಯಕ್ಷ ಸುಂದರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಲೆಕ್ಕಪರಿಶೋಧನೆ ಮಾಡಿದ ಸದಾಶಿವ ಹೆಗ್ಡೆ, ನಾರಾವಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಂತೋಷ ಕೋಟ್ಯಾನ್ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಕೊರಗಪ್ಪ ವರದಿಯನ್ನು ಓದಿದರು.ಸಂಘದ ಸದಸ್ಯರಿಗೆ ಲಾಭಾಂಶ ಹಸ್ತಾಂತರ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಜಯಂತ, ಕಾರ್ಯದರ್ಶಿಯಾಗಿ ಸುಶಾಂತ್ ಇವರನ್ನು ಆಯ್ಕೆ ಮಾಡಲಾಯಿತು.