Site icon Suddi Belthangady

ಸ್ಪೀಕರ್ ಯು.ಟಿ ಖಾದರ್ ನ್ಯೂ ಕರ್ನಾಟಕ ಗ್ಲಾಸ್ & ಪ್ಲೈವುಡ್ ಮಾಲಕರ ಮನೆಗೆ ಭೇಟಿ

ಬೆಳ್ತಂಗಡಿ: ಇತ್ತೀಚೆಗೆ ಅನ್ಸಾರಿಯ ಜುಮಾ ಮಸೀದಿ ಬೆಳಾಲಿನಲ್ಲಿ ನಡೆದ ಬುರ್ದಾ ಹಾಗೂ ತಾಜುಲ್ ಉಲಾಮ ಅನುಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಪೀಕರ್ ಯು.ಟಿ ಖಾದರ್ ರವರು ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಹೋಗುವಾಗ ನ್ಯೂ ಕರ್ನಾಟಕ ಗ್ಲಾಸ್ ಅಂಡ್ ಪ್ಲೈವುಡ್ ಗುರುವಾಯನಕೆರೆ ಅಂಗಡಿ ಮಾಲೀಕರಾದ ಮಹಮ್ಮದ್ ಶರೀಪ್ ಹಾಗೂ ಹೈದರ್ ಬೆಳಾಲು ಇವರ ಮನೆಗೆ ಬೇಟಿ ನೀಡಿದರು.ಮನೆಯವರು ಸ್ವಾಗತಿಸಿ ಗೌರವಿಸಿದರು.

ಬೆಳಾಲು ಗ್ರಾಮಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಯು ಟಿ ಖಾದರ್ ರವರು ಬೆಳಾಲಿನ ಜನತೆಯ ಬಗ್ಗೆ ಪ್ರಶಂಸಿಸಿದರು.

ಸುಲೈಮಾನ್ ಬೆಳಾಲು ರವರು ಊರಿಗೆ ಕೆಲವು ಅಗತ್ಯ ಇರುವ ವಿಚಾರಗಳನ್ನು ಅವರೊಂದಿಗೆ ತಿಳಿಸಿದಾಗ ಅದನ್ನು ಈಡೇರಿಸುವ ಭರವಸೆಯನ್ನು ಕೊಟ್ಟರು.

Exit mobile version