ಬೆಳ್ತಂಗಡಿ: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಕ್ಷೇತ್ರದ ಭಕ್ತ ವರ್ಗ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಶಾಸಕ ಹರೀಶ್ ಪೂಂಜರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕ್ಷೇತ್ರದ ಬಗ್ಗೆ ತಿಳಿಸಿದರು.
ಬ್ರಹ್ಮಕಲಶೋತ್ಸವವು ಡಿ.24 ರಿಂದ 28ರವರೆಗೆ ನಡೆಯಲಿದ್ದು ಸಮಿತಿ ಗೌರವಾಧ್ಯಕ್ಷ ಹರೀಶ್ ಪೂಂಜರವರಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಂಪೂರ್ಣ ಸಹಕಾರವನ್ನು ಯಾಚಿಸಿ ದೇವಸ್ಥಾಮದ ವ್ಯವಸ್ಥಾಪನ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಹಾಗೂ ಊರವರ ವತಿಯಿಂದ ಶಾಸಕರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಎಂ.ಪಾರೆಂಕಿ, ಅರ್ಚಕ ಸೂರ್ಯನಾರಾಯಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೊಸಲಾಯಿ, ಸುಧೀರ್ ಆರ್ ಸುವರ್ಣ, ನಾರಾಯಣ ಗೌಡ, ವಿಶ್ವನಾಥ್, ಸಂಜೀವ ನಾಯ್ಕ್, ಚಿದಾನಂದ, ವಸಂತ, ಸತೀಶ್, ಜಗನ್ನಾಥ, ಸತೀಶ್, ವಿಶ್ವನಾಥ್, ಜಯಂತಿ, ವೇದಾವತಿ, ಬಾಲಕೃಷ್ಣ, ಕೃಷ್ಣಪ್ಪ ಪಿದಾರ ಶೀನಪ್ಪ, ಸೋಮನಾಥ ಇವರುಗಳು ಉಪಸ್ಥಿತರಿದ್ದರು.