Site icon Suddi Belthangady

ಬೆಳ್ತಂಗಡಿ: ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಸ್ಪರ್ಧಾತ್ಮಕ ಉದ್ಯೋಗ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ: ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ, ಕುಲಾಲ/ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಇವರ ಸಹಯೋಗದೊಂದಿಗೆ ಕುಲಾಲ ಸಾಂತ್ವನ ನಿಧಿ ಸಮಿತಿ ವತಿಯಿಂದ ಸ್ಪರ್ಧಾತ್ಮಕ ಉದ್ಯೋಗ ಮಾರ್ಗದರ್ಶನ ಮತ್ತು ತರಬೇತಿ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ತಾಲೂಕು ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ಕಾರಿಂಜ ಉದ್ಘಾಟಿಸಿದರು.

ಬಳಿಕ ಸ್ಪರ್ಧಾತ್ಮಕ ಉದ್ಯೋಗ ಮಾರ್ಗದರ್ಶನವನ್ನು ಜೂನಿಯರ್ ಕಾಲೇಜು ಬೆಳ್ತಂಗಡಿ ಉಪನ್ಯಾಸಕರಾದ ಗಣೇಶ್ ಭಟ್ ನೀಡಿದರು.

ಚಾರ್ಟೆಡ್ ಅಕೌಂಟೆಂಟ್ ಅಭಿನವ್ ಕುಲಾಲ್ ಇವರು ಸಿಎ ಕಂಪ್ಲೀಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಮಾರ್ಗದರ್ಶನ ನೀಡಿದರು.ಉದ್ಯಮಿ ಲೋಕೇಶ್ ಕುಲಾಲ್ ಉದ್ಯಮದ ಬಗ್ಗೆ , ನಿವೃತ್ತ ಉಪತಹಶಿಲ್ದಾರ್ ಎಚ್. ಪದ್ಮ ಕುಮಾರ್ ಕಂದಾಯ ಇಲಾಖೆಯ ಬಗ್ಗೆ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಪಂಚಾಯತ್ ರಾಜ್ ಬಗ್ಗೆ ಮಾಹಿತಿ ನೀಡಿದರು. ವಾಣಿಜ್ಯ ತೆರಿಗೆ ಅಧಿಕಾರಿ ಯತೀಶ್ ಸಿರಿಮಜಲ್, ಶಿಕ್ಷಕ ಜಗನ್ನಾಥ್ ಕುಲಾಲ್, ವಿಶಾಲ್ ಹಾಗೂ ಹರೀಶ್ ಇವರುಗಳು ವಿದ್ಯಾರ್ಥಿಗಳ ಜೊತೆ ನೇರ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ಕಾರ್ಯಕ್ರಮವನ್ನ ಯತೀಶ್ ಸಿರಿಮಜಲು ಸ್ವಾಗತಿಸಿ, ಜಗನ್ನಾಥ್ ಕುಲಾಲ್ ವಂದಿಸಿದರು. ಉಪನ್ಯಾಸಕ ಸುಧೀರ್ ಕೆಎನ್ ಕಾರ್ಯಕ್ರಮ ನಿರೂಪಿಸಿದರು.

Exit mobile version