Site icon Suddi Belthangady

ರಕ್ತೇಶ್ವರಿಪದವು ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಎಂ.ಸಿ ಸ್ಟ್ಯಾಂಡ್ ಕೊಡುಗೆ

ನ್ಯಾಯತರ್ಪು: ರಕ್ತೇಶ್ವರಿಪದವು ಶಾಲೆಯಲ್ಲಿ ಶಾರದಾ ಪೂಜೆ ಮತ್ತು ರಕ್ತೇಶ್ವರಿ ಪದವು ದೀಪಾವಳಿ ಸ್ವಸಹಾಯ ಸಂಘದ ವತಿಯಿಂದ ಎಂ.ಸಿ. ಸ್ಟ್ಯಾಂಡ್ ನ್ನು ಶಾಲೆಗೆ ಕೊಡುಗೆಯಾಗಿ ನೀಡಿದ ಕಾರ್ಯಕ್ರಮ ಅ.29 ರಂದು ಜರುಗಿತು.

ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ರಕ್ತೇಶ್ವರಿ ಪದವು ಇದರ ಅರ್ಚಕ ಜಗನ್ನಾಥ ವೂಜಾರಿ ರವರು ಶಾರದಾ ಪೂಜೆ ಮಾಡಿದರು.

ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಮಕ್ಕಳ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯ ಕ್ರಮವನ್ನು ನೆರವೇರಿಸಿದರು.

ರಕ್ತೇಶ್ವರಿಪದವು ದೀಪಾವಳಿ ಸ್ವಸಹಾಯ ಸಂಘದ ಸದಸ್ಯರಾದ ಗೋಪಾಲ ಗೌಡ ಎಂ, ವಸಂತ ಗೌಡ ಕೆ, ಕುಶಾಲಪ್ಪ ಗೌಡ ಕೆ, ರಂಜನ್ ಎಂ, ಪದ್ಮನಾಭ ನಾಯ್ಕ ಕೆ,ರಮೇಶ ಪೂಜಾರಿ ರವರ ನೇತೃತ್ವದಲ್ಲಿ ಅಂದಾಜು 14 ಸಾವಿರ ಮೌಲ್ಯದ ಎಂ.ಸಿ. ಸ್ಟ್ಯಾಂಡ್ ನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಕವಿತಾಶ್ರೀ ಮತ್ತು ಮುಖ್ಯ ಶಿಕ್ಷಕಿ ಚೈತ್ರಪ್ರಭಾ ಶ್ರೀಶಾಂ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಸಂತ ಗೌಡ ಕೆ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಯಾದವ ಗೌಡ ಎಮ್, ಕಳಿಯ ಗ್ರಾಮ ಪಂಚಾಯತ್ ಸದಸ್ಯೆ ಮೋಹಿನಿ, ಸಹಶಿಕ್ಷಕಿ ಲಾವಣ್ಯ ಕೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ವಂದಿಸಿದರು.ಅಡುಗೆ ಸಿಬ್ಬಂದಿಗಳಾದ ವಸಂತಿ ಮತ್ತು ಲತಾ ಸಹಕರಿಸಿದರು.

Exit mobile version