Site icon Suddi Belthangady

ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಸದಿಂದ ರಸ ಕಾರ್ಯಕ್ರಮ

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು ಇಲ್ಲಿ ಬರೀ ಶಿಕ್ಷಣಕ್ಕೆ ಮಹತ್ವವನ್ನು ನೀಡುವುದಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕೆಂಬ ಆಸೆಯಿಂದ ಶಾಲಾ ಸಂಚಾಲಕ ಗಿರೀಶ್ ಕೆ ಎಚ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿತ್ ಕುಲಾಲ್ ಮಾರ್ಗದರ್ಶನದಲ್ಲಿ ಪ್ರತಿ ಶುಕ್ರವಾರದಂದು ವಿದ್ಯಾರ್ಥಿಗಳನ್ನು ಹಲವಾರು ವಿಭಾಗಗಳಾಗಿ ವಿಂಗಡಿಸಿ, ಎಲ್ಲಾ ವಿಭಾಗದ ವಿದ್ಯಾರ್ಥಿಗಳು “ಕಸದಿಂದ ರಸ” ಎಂಬ ವಿಷಯದಂತೆ ವಿವಿಧ ಬಗೆಯ ಕ್ರಾಫ್ಟ್ ವರ್ಕ್‌ಗಳನ್ನು ಮಾಡಲಾಯಿತು.

ವಿಭಾಗವಾರು ಶಿಕ್ಷಕರಾದ ವಿಜ್ಞಾನ ವಿಭಾಗದಿಂದ ವಿನಯ್ ಮತ್ತು ಸ್ವಾತಿ, ಸಾಂಸ್ಕೃತಿಕ ವಿಭಾಗದಿಂದ ಸಪ್ನಝ್ ಮತ್ತು ಸುಜಾತ, ಗಣಿತ ವಿಭಾಗದಿಂದ ಶ್ವೇತಾ ಮತ್ತು ಸಂಧ್ಯಾ, ಪರಿಸರ ವಿಭಾಗದಿಂದ ರೂಪಲತಾ ಮತ್ತು ಸ್ವರ್ಣ ಲತಾ, ಸೇವಾದಳ ವಿಭಾಗದಿಂದ ಪವಿತ್ರ ಮತ್ತು ಶುಭ, ಎನ್ ಸಿ ಸಿ ವಿಭಾಗದಿಂದ ಸಂಗೀತ ಮತ್ತು ಮಧು ವಿದ್ಯಾರ್ಥಿಗಳಿಗೆ ಸಹಕರಿಸಿದರು.

Exit mobile version