Site icon Suddi Belthangady

ಕೊಯ್ಯೂರು: ಸಹಕಾರ ಸಂಘದ ನವೋದಯ ಸ್ವಸಹಾಯ ಗುಂಪು ಸದಸ್ಯರಿಗೆ ಮಾಹಿತಿ ಕಾರ್ಯಾಗಾರ, ಬ್ಯಾಗ್ ವಿತರಣೆ

ಕೊಯ್ಯೂರು: ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಂಚದುರ್ಗಾ ಸಹಕಾರ ಸಭಾಭವನದಲ್ಲಿ ನವೋದಯ ಸ್ವಸಹಾಯ ಗುಂಪುಗಳಿಗೆ ಮಾಹಿತಿ ಶಿಬಿರ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿದ್ದು ವರ್ಗಾವಣೆಗೊಂಡ ಬಾಲಕೃಷ್ಣ ಬೇರಿಕೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್ ಸನ್ಮಾನಿತರ ಪರಿಚಯ ಮಾಡಿದರು.ನೂತನ ಪ್ರಭಾರ ಪ್ರಾಂಶುಪಾಲ ಮೋಹನಗೌಡ ಬಂಡಾರಿಕೋಡಿ ಇವರನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ನವೋದಯ ಸ್ವ ಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರವನ್ನು ನವೋದಯ ಜಿಲ್ಲಾ ಮೇಲ್ವಿಚಾರಕ ರಂಜಿತ್ ಕುಮಾರ್ ಮತ್ತು ಸ್ಟಾನ್ಲಿ ಪಿಂಟೋ ನಡೆಸಿಕೊಟ್ಟರು.

ನವೋದಯ ಸ್ವಸಹಾಯ ಬಗ್ಗೆ ಸಂಘದ ನಿರ್ದೇಶಕ ಅಶೋಕ್ ಕುಮಾರ್ ಅಗ್ರಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ರಾಜೇಂದ್ರ ಕುಮಾರ್ ಇವರು ಸದಸ್ಯರ ಅಭ್ಯುದಯದ ದೃಷ್ಟಿಯಿಂದ ಕೈಗೊಂಡ ಅನೇಕ ವಿಚಾರಗಳನ್ನು ಸದಸ್ಯರಿಗೆ ತಿಳಿ ಹೇಳಿದರು.2 ಹೊಸ ಸ್ವಸಹಾಯ ಸಂಘ ರಚನೆ ಮಾಡಲಾಯಿತು.ನವೋದಯದ ಸದಸ್ಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿ ನವೋದಯ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಬ್ಯಾಗ್ ವಿತರಣೆ ಮಾಡುತ್ತಾ 150 ಸ್ವಸಹಾಯ ಸಂಘಗಳು ಸಕ್ರಿಯವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೇಂದ್ರ ರಾಜ್ಯ ಸರಕಾರ ನೀಡುತ್ತಿರುವ ಸವಲತ್ತು ಮತ್ತು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಇದರ ಅಧಿಕಾರಿಗಳು ನೀಡುತ್ತಿರುವ ಸಹಕಾರದೊಂದಿಗೆ ಸಹಕಾರ ಸಂಘ ಉತ್ತಮ ಸಾಧನೆ ಮಾಡುವಲ್ಲಿ ನೆರವಾಗಿದೆ ಎಂದು ತಿಳಿಸಿದರು.

ನವೋದಯ ಸ್ವ ಸಹಾಯ ಸಂಘದ ಪ್ರೇರಕಿ ಚಂಪಾರವರ ಕಾರ್ಯಕ್ರಮದ ಸಂಯೋಜನೆ ಮತ್ತು ಸಂಘದ ಸಿಬ್ಬಂದಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮ ವ್ಯವಸ್ಥೆಗೊಳಿಸಿದರು.ನಿರ್ದೇಶಕರುಗಳಾದ ಡೀಕಯ್ಯ ಪೂಜಾರಿ, ಪರಮೇಶ್ವರ ಗೌಡ, ಹೊನ್ನಪ್ಪ ಪೂಜಾರಿ, ಪುರುಷೋತ್ತಮ, ಯತೀಶ ದಡ್ಡು, ಗುಲಾಬಿ, ರೇವತಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೇತ್ರ ನವೋದಯ ಸ್ವಸಹಾಯ ಸಂಘದ ಕುಮಾರಿ ಕುಸುಮ ರವರ ಪ್ರಾರ್ಥನೆ ಮತ್ತು ನಿರ್ದೇಶಕ ಉಜ್ವಲ್ ಕುಮಾರ್ ಸ್ವಾಗತಿಸಿದರು ಮತ್ತು ಸಂಘದ ನಿರ್ದೇಶಕ ರವೀಂದ್ರನಾಥ್ ಪೆರ್ಮುದೆ ವಂದಿಸಿದರು.

Exit mobile version