ಪೆರ್ಲ: ಓಂಕಾರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಶಿಬಾಜೆ ಇದರ ವಾರ್ಷಿಕ ಮಹಾಸಭೆ ಅ.27 ರಂದು ಪೆರ್ಲದ ರಾಜೀವ್ ಗಾಂಧಿ ಸೇವಾ ಕೆಂದ್ರದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶೋಭರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ರತ್ನ ರವರು, ಉಪಾಧ್ಯಕ್ಷರಾದ ದಿನಕರ್ ಕುರುಪ್, ನಿಕಟಪೂರ್ವ ಅಧ್ಯಕ್ಷರಾದ ರತೀಶ್ ಬಿ,ನಿಕಟಪೂರ್ವ ಉಪಾಧ್ಯಕ್ಷರಾದ ವಿನಯಚಂದ್ರ ಟಿ, ಸದಸ್ಯರಾದ ಯಮುನಾ, ವನಿತಾ ವಸಂತ್ ಶೆಟ್ಟಿಗಾರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಜ್, ನಿಡ್ಲೆ ಪಂಚಾಯತ್ ಕಾರ್ಯದರ್ಶಿ ಕೇಶವ ಪಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶೋಭಾ, ತಾಲೂಕು ಕಾರ್ಯ ವ್ಯವಸ್ಥಾಪಕರಾದ ಪ್ರತಿಮಾ, ಬೆಳ್ತಂಗಡಿ ವಲಯ ಮೇಲ್ವಿಚಾರಕರಾದ ಜಯಾನಂದ, ನಿತೇಶ್, ಸ್ವಸ್ತಿಕ್, ವೀಣಾ, ಜಯಂತಿ, ಪುಷ್ಪಾ, ಸವಿತಾ, ಒಕ್ಕೂಟದ ಪದಾಧಿಕಾರಿಗಳಾದ ಹರಿಣಿ, ಶ್ವೇತಾ, ಜಾನಕಿ, ಕಮಲಾಕ್ಷಿ, ಒಕ್ಕೂಟದ ಆರಂಭಿಕ ಪದಾಧಿಕಾರಿಗಳಾದ ಉಮಾವತಿ, ಗಾಯತ್ರಿ, ಸೀತಾ, ಪ್ರತಿಮಾ, ಲೋಲಾಕ್ಷಿ, ಶೋಭಾ ಪಿ.ಎಸ್, ಸರೋಜ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿ ಹೆಚ್ ಒ ರವರು, ಆಶಾಕಾರ್ಯಕರ್ತೆಯರು, ಒಕ್ಕೂಟದ ಎಲ್.ಸಿ.ಅರ್. ಪಿ ಗಳಾದ ಮಾಲತಿ, ಗೀತಾ, ಪಶುಸಖಿ ರಮ್ಯಾ, ಕೃಷಿಸಖಿ ದಿವ್ಯ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಮಹಿಳಾ ತಂಡದ ಸದಸ್ಯರು ಸ್ವತಃ ತಾವೇ ತಯಾರಿಸಿದ, ಬೆಳೆದ ವಿವಿಧ ಬಗೆಯ ತಿಂಡಿ, ತರಕಾರಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀಮತಿ ಶೋಭಾ ,ಕೇಶವ ಗೌಡ ಪಿ, ರತೀಶ್ ಗೌಡ ಬಿ,ಶ್ರೀಮತಿ ಸವಿತಾ ರವರಿಗೆ ಒಕ್ಕೂಟದ ವತಿಯಿಂದ ಸನ್ಮಾನ ಏರ್ಪಡಿಸಿದ್ದರು.
ಒಕ್ಕೂಟದ ವರದಿಯನ್ನು ದಿವ್ಯ ರವರು ಮಂಡಿಸಿದರು.ಕಾರ್ಯಕ್ರಮದ ಪ್ರಾರ್ಥನೆಯನ್ನು ಶೋಭಾ ಡಿ ರಾವ್, ನಿರೂಪಣೆಯನ್ನು ಮಾಲತಿ, ಸ್ವಾಗತವನ್ನು ಲತಾ, ಧನ್ಯವಾದವನ್ನು ಗೀತಾ ನೆರವೇರಿಸಿದರು.