ನಾವೂರ: ಕಾಡಂಚಿನ ಭಾಗಗಳಲ್ಲಿ ಪದೇಪದೇ ಕಾಣಸಿಗುವ ಹೆಬ್ಬಾವುಗಳು ಆಹಾರ ಹುಡುಕಿಕೊಂಡು ಜನರು ಓಡಾಡುವ ಪ್ರದೇಶಗಳಲ್ಲಿ ಕಾಣಿಸಿಕೊಂಡು ಮಕ್ಕಳಲ್ಲಿ, ಮಹಿಳೆಯರಲ್ಲಿ ಭಯ ವಾತಾವರಣ ನಿರ್ಮಾಣವಾಗಿತ್ತು.
ಕೆಲವರು ಕೊಲ್ಲುವ ಪ್ರಯತ್ನ ಮಾಡುತ್ತಾರೆ.ಆದರೆ ಇತ್ತೀಚಿಗೆ ಉರಗಗಳ ಬಗ್ಗೆ ಜನರಲ್ಲಿ ಪ್ರೇಮ ಭಾವನೆ ಇದ್ದು ಸ್ಥಳೀಯರು ಅದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವಂತ ಕೆಲಸವನ್ನು ಮಾಡುತ್ತಿದ್ದಾರೆ.
ಅ.24ರಂದು ರಾತ್ರಿ ಕಾಣಿಸಿಕೊಂಡ ಹೆಬ್ಬಾವನ್ನು ಸ್ಥಳೀಯ ಉರಗ ಪ್ರೇಮಿ ಯುವಕರಾದ ಅಶ್ವಥ್ ಮತ್ತು ಪ್ರದೀಪ ರವರು ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಿ ರಕ್ಷಿತಾರಣ್ಯಗೆ ಬಿಡಲಾಯಿತು.