Site icon Suddi Belthangady

ನಾಳ: ಶರನ್ನವರಾತ್ರಿ ಪೂಜೆ ಮತ್ತು ಭಜನೋತ್ಸವ

ನ್ಯಾಯತರ್ಪು: ನಾಳ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ.15ರಿಂದ ಪ್ರಾರಂಭಗೊಂಡು ಅ.25ರವರೆಗೆ ನವರಾತ್ರಿ ಪೂಜೆ, ಪ್ರತಿದಿನ ಅನ್ನಸಂತರ್ಪಣೆ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ ನಡೆಯಲಿದೆ.

ಅ.23ರಂದು ಆಯುಧಪೂಜೆ, ಮಂತ್ರಾಕ್ಷತೆ ಭಜನಾ ಸೇವಾಕರ್ತರು ವಸಂತ ಮಜಲು ಮತ್ತು ಕುಟುಂಬಸ್ಥರು, ರಾತ್ರಿ 7ಕ್ಕೆ ಶ್ರೀ ಬಾಲವಿಕಾಸ ಭಜನಾ ಮಂಡಳಿ ಕುಲಾಯಿ, ಹೊಸಬೆಟ್ಟು ಮಹಿಳಾ ಭಜನಾ ತಂಡದಿಂದ ವಿಶೇಷ ಕುಣಿತ ಭಜನೆ ನಡೆಯಿತು.

ದೇವಳದ ಬ್ರಹ್ಮಶ್ರೀ ಬಾಲಕೃಷ್ಣ ಪಂಗಣ್ಣಾಯ ರವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರ ನೇತೃದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ನವರಾತ್ರಿ ಪೂಜೆ, ಭಜನೋತ್ಸವ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ, ಶ್ರೀ ದುರ್ಗಾ ಮಾತೃ ಮಂಡಳಿ ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಅ.24ರಂದು ದಿ.ರಾಮಚಂದ್ರ ಭಟ್ ಹಾಗೂ ದಿ.ಸಾಯ ಗೌರಮ್ಮ ಇವರ ಸ್ಮರಾಣಾರ್ಥ ಡಾ.ಸದಾಶಿವ ರಾವ ಹಾಗೂ ಆಶಾಲತಾ ಪಳ್ಳಾದೆ, ಸಾಂತಪ್ಪ ಪೂಜಾರಿ ಮತ್ತು ಮಕ್ಕಳು ಹೊಸಮಾರಡ್ಡ ಮನೆ, ಪುರಂದರ ಶೆಟ್ಟಿ ಮತ್ತು ಮಕ್ಕಳು ಭಂಡಾರಿಕೋಡಿ, ಪ್ರಭಾಕರ ರಾವ್ ಮತ್ತು ಮನೆಯವರು ಶಾರದಾ ವಾತ್ಸಲ್ಯ ನಾಳ, ಪೂವಪ್ಪ ಶೆಟ್ಟಿ ಬಿಳಿಬೈಲು, ಗಣೇಶ್ ಡಿ.ಗಾಣಿಗ, ಮಂಜುನಾಥ ಕೃಪಾ ನಾಳ ಇವರ ಭಜನಾ ಸೇವಾರ್ಥವಾಗಿ ರಾತ್ರಿ 7ಕ್ಕೆ ದಾಸವಾಣಿ ಶ್ರೀ ದೇವಿ ಸಚಿನ್ ಮತ್ತು ಬಳಗ ನಿನಾದ ಕ್ಲಾಸಿಕಲ್ಸ್ ಮುಂಡ್ರುಪ್ಪಾಡಿ, ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಶ್ರೀ ಕ್ಷೇತ ನಾಳ ಭಜನಾ ತಂಡದಿಂದ ಭಜನಾ ಸೇವೆ ನಡೆಯಲಿದೆ.ರಾತ್ರಿ 9ಕ್ಕೆ ಮಹಾಪೂಜೆ ನಡೆಯಲಿದ್ದು, ಹಟ್ಟಿಯಗಡಿ ಮೇಳದವರಿಂದ ಚಂದ್ರಾವಳಿ ವಿಲಾಸ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.

Exit mobile version