ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ಚಂದ್ರಮಂಡಲ ರಥ ಸಮರ್ಪಿಸುವ ವಿಜ್ಞಾಪನ ಪತ್ರ ಬಿಡುಗಡೆ ಅ.23ರಂದು ದೇವರ ಸನ್ನಿಧಿಯಲ್ಲಿ ಜರುಗಿತು.
ನವರಾತ್ರಿ ಆಯುಧ ಪೂಜೆ ಮತ್ತು ವಿಶೇಷ ಪೂಜಾ ಸಮಯದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಅಸ್ರಣ್ಣರ ಪ್ರಾರ್ಥನೆ ಯೊಂದಿಗೆ ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ , ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ವಸಂತ ಮಜಲು ಬಿಡುಗಡೆ ಗೊಳಿಸಿದರು.
ದೇವಸ್ಥಾನವೂ ಸುಮಾರು 800 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿದೆ.ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅಗತ್ಯವಾದ ಬೇಡಿಕೆಯನ್ನು ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳ, ಭಕ್ತರ ಮತ್ತು ದಾನಿಗಳ ಮೂಲಕ ಪೂರೈಸಲಾಗಿದೆ.ದೇವರ ಜಾತ್ರಾ ಉತ್ಸವಕ್ಕೆ ಚಂದ್ರ ಮಂಡಲ ರಥದ ಅಗತ್ಯವಿದೆ.
ಶ್ರೀ ಕ್ಷೇತ್ರದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಂಕಲ್ಪದಂತೆ ನೂತನ ಚಂದ್ರಮಂಡಲ ರಥದ ರಚನೆ ಮಾಡುವ ಯೋಜನೆಗೆ ಕಾರ್ಯ ಪ್ರವೃತವಾಗಿದೆ.ಅಂದಾಜು 15 ಲಕ್ಷ ರೂಪಾಯಿ ವೆಚ್ಚದ ಈ ಪುಣ್ಯ ಕಾರ್ಯಕ್ಕೆ ಭಕ್ತ ಸಮೂಹ ಕೈಜೋಡಿಸಿಸಲು ವಿಜ್ಞಾಪನ ಪತ್ರದಲ್ಲಿ ವಿನಂತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಸದಸ್ಯರಾದ ಜನಾರ್ದನ ಪೂಜಾರಿ, ದಿನೇಶ್ ಗೌಡ ಕೆ, ಅಂಭಾ ಬಿ.ಆಳ್ವ, ವಿಜಯ ಹೆಚ್, ಪ್ರಸಾದ್, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಮ್, ಕಾರ್ಯದರ್ಶಿ ರಾಜೇಶ್ ಹಾಗೂ ಸದಸ್ಯರು, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ಪದಾಧಿಕಾರಿಗಳು, ದೇವಸ್ಥಾನದ ಪ್ರಭಂಧಕ ಗಿರೀಶ್ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಲೋಕೇಶ್ ಎನ್ ಹಾಗೂ ಪದಾಧಿಕಾರಿಗಳು, ದೇವಸ್ಥಾನದ ವಿವಿಧ ಸಮಿತಿ ಸದಸ್ಯರಾದ ಕೃಷ್ಣ ಕುಂಟಿನಿ,ಸುರೇಶ್ ಕುಮಾರ್ ಆರ್.ಎನ್, ಗಣೇಶ್ ಗೌಡ, ಸತೀಶ್ ಭಂಡಾರಿ, ಉಮಾನಾಥ ಶೆಟ್ಟಿ, ರಘರಾಮ್ ಭಟ್, ಪೂವಪ್ಪ ಶೆಟ್ಟಿ, ಪದ್ಮನಾಭ ಶೆಟ್ಟಿ, ಲೋಕಯ್ಯ ಗೌಡ, ಶಶಿಧರ ಶೆಟ್ಟಿ ಹೆಚ್, ಯೋಗೀಶ್ ಸುವರ್ಣ, ಸಂಧ್ಯಾ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.