Site icon Suddi Belthangady

ಬೆಳ್ತಂಗಡಿ: ಜೈನ ಪೇಟೆ ಬಳಿ 2 ಕಾರುಗಳು ಮುಖಾಮುಖಿ ಡಿಕ್ಕಿ- ಪ್ರಯಾಣಿಕರು ಅಪಾಯದಿಂದ ಪಾರು

ಬೆಳ್ತಂಗಡಿ: ಇಲ್ಲಿಯ ಜೈನ ಬಸದಿ ಬಳಿ ಪ್ರವಾಸಿಗರ ಕಾರುಗಳೆರಡು ಪರಸ್ಪರ ಡಿಕ್ಕಿ ಹೊಡೆದುಕೊಂಡ ಘಟನೆ ಅ.23 ರಂದು ಮಧ್ಯಾಹ್ನ ಸಂಭವಿಸಿದೆ.

ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿ ಕಡೆ ಹೋಗುವ ಕಾರು ಹಾಗೂ ಬೆಳ್ತಂಗಡಿಯಿಂದ ಗುರುವಾಯನಕೆರೆ ಕಡೆಗೆ ಹೋಗುವ ಕಾರು ಮುಖಿಯಾಗಿ ಡಿಕ್ಕಿಯಾಗಿದ್ದು, ಎರಡು ಕಾರುಗಳ ಎದುರು ಭಾಗ ಸಂಪೂರ್ಣ ಜಖಂಗೊಂಡಿದೆ.

ಎರಡು ಕಾರುಗಳಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಕ್ಕೊಳಗಾಗಿ ಅಪಾಯದಿಂದ ಪಾರಾಗಿದ್ದಾರೆ.

Exit mobile version