Site icon Suddi Belthangady

ಕೊಕ್ಕಡ: ಒಟಿಪಿ ಪಡೆದು ಖಾತೆಯಿಂದ ರೂ.1.46 ಲಕ್ಷ ವಂಚನೆ: ಮಹಿಳೆಯಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು

ಕೊಕ್ಕಡ: ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿ ವ್ಯವಹರಿಸಿ ಒಟಿಪಿ ಪಡೆದುಕೊಂಡು ಖಾತೆಯಿಂದ ರೂ.1,46,900 ವರ್ಗಾಯಿಸಿಕೊಂಡು ಮೋಸ ಮಾಡಿರುವ ಬಗ್ಗೆ ಕೊಕ್ಕಡದ ಮಹಿಳೆಯೋರ್ವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಕ್ಕಡ ನಿವಾಸಿ ಹರಿಣಿ (40ವ) ಮೋಸ ಹೋದ ಮಹಿಳೆ.ಹರಿಣಿ ಅವರು 1 ವಾರದ ಹಿಂದೆ ಜಮೀನು ಮಾರಾಟದ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಿದ್ದರು. ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ಹರಿಣಿಯವರ ಜೊತೆಗೆ ಯಾರೋ ಅಪರಿಚಿತರು ವ್ಯವಹರಿಸಿ ಅ.21ರಂದು ಒಟಿಪಿ ಕೇಳಿ ಪಡೆದುಕೊಂಡು ಹರಿಣಿಯವರ ಖಾತೆಯಿಂದ ರೂ.1,46,900 ವರ್ಗಾಯಿಸಿ ಮೋಸ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಹರಿಣಿಯವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 82/2023, ಕಲಂ:419, 420 ಐಪಿಸಿ ಮತ್ತು ಕಲಂ 66(ಸಿ) 66(ಡಿ) ಐಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

Exit mobile version